ಜಮೀನಿನಲ್ಲಿ ಕೆಲಸ ಮಾಡುವಾಗ ಸಿಡಿಮದ್ದು ಸ್ಪೋಟ: ರೈತನಿಗೆ ಗಂಭೀರ ಗಾಯ… ಮೈಸೂರು,ಜೂ4,2019(..): ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸಿಡಿಮದ್ದು ಸ್ಪೋಟಗೊಂಡು ರೈತನಿಗೆ ಗಾಯವಾಗಿರುವ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನಲ್ಲಿ ನಡೆದಿದೆ. ಹುಣಸೂರು ತಾಲ್ಲೂಕಿನ ಮುತ್ತುರಾಯನ ಹೊಸಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಸ್ವಾಮೇಗೌಡ ಪುತ್ರ ಶಿವ ಗಾಯಗೊಂಡವರು. ಶಿವ ಜಮೀನಿ‌ನಲ್ಲಿ ತಂಬಾಕು ಬೆಳೆಯ ಕಳೆ ತೆಗೆಯುತ್ತಿದ್ದರು. ಕುಡುಗೋಲಿನಿಂದ ಕಳೆ ತೆಗೆಯುವಾಗ ಸಿಡಿಮದ್ದು ಸಿಡಿದಿದೆ. ಈ ವೇಳೆ ರೈತನ ಮುಖ, ಎದೆ ಭಾಗಕ್ಕೆ ಗಂಭೀರ ಗಾಯವಾಗಿದೆ. ಗಾಯಾಳು ರೈತನನ್ನ ಅಲ್ಲಿದ್ದ ಗ್ರಾಮಸ್ಥರು ತಕ್ಷಣ ಹುಣಸೂರು ಸಾರ್ವಜನಿಕ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದ್ದಾರೆ. ಬೇಟೆರಗಾರರು ಹಂದಿ ಬೇಟೆಗಾಗಿ ಭೂಮಿಗೆ ಸಿಡಿಮದ್ದು ಹೂಳಿದ್ದರು ಎನ್ನಲಾಗಿದೆ. : . # # # # #.