ಹೆಚ್.ಡಿ ದೇವೇಗೌಡರು ಮತ್ತು ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿರುದ್ದ ನಾನು ಮಾತನಾಡಿಲ್ಲ- ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ಸ್ಪಷ್ಟನೆ… ಮೈಸೂರು,ಮೇ,1,2019(..): ಕೆ.ಆರ್ ನಗರ ಪುರಸಭೆ ಟಿಕೆಟ್ ಹಂಚಿಕೆ ವಿಚಾರದಲ್ಲಿ ತಮ್ಮ ಸಮುದಾಯವನ್ನ ಕಡೆಗಣಿಸಲಾಗಿದೆ ಸಚಿವ ಸಾ.ರಾ ಮಹೇಶ್ ವಿರುದ್ದ ಅಸಮಾಧಾನ ಹೊರಹಾಕಿದ್ದ ಹೆಚ್.ವಿ ವಿಶ್ವನಾಥ್, ತಾವು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಹಾಗೂ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿರುದ್ದ ಮಾತನಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಕೆ.ಆರ್ ನಗರ ಪುರಸಭೆ ಚುನಾವಣೆಯಲ್ಲಿ ಜೆಡಿಎಸ್ ಸೋತಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದ ಹೆಚ್.ವಿಶ್ವನಾಥ್ ಈ ಸಂಬಂಧ ಸಚಿವ ಸಾ.ರಾ ಮಹೇಶ್ ವಿರುದ್ದ ವಾಗ್ದಾಳಿ ನಡೆಸಿದ್ದರು. ತಾವು ಹೇಳಿದ್ದವರಿಗೆ ಟಿಕೆಟ್ ನೀಡದೆ ದರ್ಪ ಮೆರೆದಿದ್ದಾರೆ. ತಮ್ಮ ಸಮುದಾಯವನ್ನ ಕಡೆಗಣಿಸಿದ್ದಾರೆ ಎಂದು ಆರೋಪಿಸಿದ್ದರು. ಈ ಕುರಿತು ಮಾಧ್ಯಮಗಳಲ್ಲಿ ವರದಿಯಾಗಿದ್ದು ಜೆಡಿಎಸ್ ಪಕ್ಷದ ವಿರುದ್ದವೇ ಹೆಚ್.ವಿಶ್ವನಾಥ್ ತಿರುಗಿ ಬಿದ್ದಿದ್ದಾರೆ ಎಂದು ವರದಿಯಾಗಿತ್ತು. ಆದರೆ ಈ ಬಗ್ಗೆ ಹುಣಸೂರಿನಲ್ಲಿ ಸ್ಪಷ್ಟನೆ ನೀಡಿರುವ ಹೆಚ್.ವಿಶ್ವನಾಥ್, ಸಾ.ರಾ ಮಹೇಶ್ ದೌಲತ್ತು. ಹಣ ಬಲದಿಂದ ಏನು ಮಾಡಲು ಆಗಲ್ಲ ಎಂದು ಹೇಳಿದ್ದು ನಿಜ. ನಾನು ಮಾತನಾಡಿದ್ದು ಸಚಿವ ಸಾ.ರಾ ಮಹೇಶ್ ವಿರುದ್ದ ವಿನಹ ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡರು ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿರುದ್ದ ಅಲ್ಲ ಎಂದು ತಿಳಿಸಿದರು. ಕೆ.ಆರ್ ನಗರ ಪುರಸಭೆ ಟಿಕೆಟ್ ಹಂಚಿಕೆ ವಿಚಾರದಲ್ಲಿ ನನಗೆ ಬೇಸರ ತಂದಿದೆ. ಹೀಗಾಗಿ ನಾನು ಸಚಿವರ ವಿರುದ್ದ ಹೇಳಿಕೆ ನೀಡಿದ್ದೇನೆ. ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಟಿಕೆಟ್ ಕೊಡಲಿಸಲು ಆಗಲಿಲ್ಲ ಎಂದು ಊರಲ್ಲೆಲ್ಲಾ ಮಾತನಾಡುತ್ತಾರೆ. ಹೀಗಾಗಿ ನೋವಿನಿಂದ ಮಾತನಾಡಿದೆ. ನಾನು ಟಿಕೆಟ್ ಕೇಳಿದ್ದೆ. ನನ್ನ ಮಗ ಟಿಕೆಟ್ ಕೇಳಿದ್ದ ನಮ್ಮ ಮಾತು ಧಿಕ್ಕರಿಸಿ ಬೇರೆಯವರಿಗೆ ಟಿಕಟ್ ನೀಡಿದ್ದಕ್ಕೆ ಸೋಲುವಂತಾಯಿತು. ಸಾರಾ ಮಹೇಶ್ ದ್ವೇಷದ ರಾಜಕಾರಣ ಮಾಡಬೇಡಿ ಎಂದು ಮತ್ತೊಮ್ಮೆ ಹೆಚ್.ವಿಶ್ವನಾಥ್ ಕಿವಿಮಾತು ಹೇಳಿದರು. : - # # # #