ಟ್ವಿಟರ್ ಅಕೌಂಟ್ ಬ್ಲಾಕ್: ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ಹುದ್ದೆ ತೊರೆದರಾ ನಟಿ ರಮ್ಯಾ ಬೆಂಗಳೂರು:ಜೂ-2:(..) ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ, ಮಾಜಿ ಸಂಸದೆ, ನಟಿ ರಮ್ಯಾ ಅವರ ಟ್ವಿಟರ್ ಖಾತೆ ಬ್ಲಾಕ್ ಆಗಿದೆ. ಈ ಹಿನ್ನಲೆಯಲ್ಲಿ ರಮ್ಯಾ ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ಹುದ್ದೆಯನ್ನು ತೊರೆದಿದ್ದಾರೆಯೇ ಎಂಬ ಶಂಕೆ ಆರಂಭವಾಗಿದೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಪಕ್ಷ ಹೀನಾಯವಾಗಿ ಸೋಲು ಅನುಭವಿಸದ ಬೆನ್ನಲ್ಲೇ ರಮ್ಯಾ ತಮ್ಮ ಟ್ವೀಟರ್​ ಖಾತೆಯನ್ನು ಬ್ಲಾಕ್​ ಮಾಡಿದ್ದಾರೆ ಎನ್ನಲಾಗುತ್ತಿದ್ದು, ಅವರ ಖಾತೆಯಲ್ಲಿದ್ದ ಎಲ್ಲಾ ಸಂದೇಶಗಳನ್ನು ಅಳಿಸಿ ಹಾಕಿದ್ದಾರೆ. ಇದರಿಂದ ಯಾವುದೇ ಸಂದೇಶಗಳು ಸಹ ತೋರುತ್ತಿಲ್ಲ. ಯಾವ ಕಾರಣದಿಂದಾಗಿ ಸಂದೇಶಗಳನ್ನು ಅಳಿಸಿಹಾಕಿದ್ದಾರೆ ಎಂದೂ ಸಹ ತಿಳಿದುಬಂದಿಲ್ಲ. ರಮ್ಯಾ ಅವರು ತಮ್ಮ ಟ್ವೀಟರ್​ ಖಾತೆಯನ್ನು ಬ್ಲಾಕ್​ ಮಾಡಿರುವ ಬಗ್ಗೆ ಕಾಂಗ್ರೆಸ್​ ಪಕ್ಷದ ಮಾಧ್ಯಮ ವಿಭಾಗ ಸಹ ಮಾಹಿತಿ ನೀಡಲು ನಿರಾಕರಿಸಿದ್ದು, ರಮ್ಯಾ ತಮ್ಮ ಹುದ್ದೆ ತೊರೆದಿರಬಹುದು ಎಂಬ ಅನುಮಾನ ಕೂಡ ಮೂಡಿದೆ.