ಮೈಸೂರು ಮೆಡಿಕಲ್ ಕಾಲೇಜ್ ಹಾಸ್ಟೆಲ್ ಗಳ ಸ್ವಚ್ಛತೆ ನಿರ್ವಹಣೆ ಮಾಸಿಕ ವೆಚ್ಚ 1 ರೂಪಾಯಿ ..! ಮೈಸೂರು, ಜೂ.01, 2019 : (.. ) : ಪ್ರತಿಷ್ಠಿತ ಮೈಸೂರು ಮೆಡಿಕಲ್ ಕಾಲೇಜಿನ ಆಡಳಿತ ವರ್ಗಕ್ಕೆ ಟೆಂಡರ್ ಮಂಜೂರು ಮಾಡುವ ವಿಷಯಕ್ಕೆ ಸಂಬಂಧಿಸಿದಂತೆ ವಿಚಿತ್ರ ಸಮಸ್ಯೆಯೊಂದು ಎದುರಾಗಿದೆ. ಕೆಲ ದಿನಗಳ ಹಿಂದೆ ಮೈಸೂರು ಮೆಡಿಕಲ್ ಕಾಲೇಜ್ ವತಿಯಿಂದ, , . ಹೆಸರಿನಡಿ ಮೂರು ವಿವಿಧ ಕಾರ್ಯದ ಟೆಂಡರ್ ಆಹ್ವಾನಿಸಲಾಗಿತ್ತು. ಕ್ಲೀನಿಂಗ್ ಸೂಪರ್ ವೈಸರ್ , ಕ್ಲೀನಿಂಗ್ ಸ್ಟಾಫ್ , ಕ್ಲೀನಿಂಗ್ ಮೆಟಿರಿಯಲ್ಸ್ ಕಾರ್ಯದಡಿ ಟೆಂಡರ್ ಆಹ್ವಾನಿಸಲಾಗಿತ್ತು. ಇದಕ್ಕೆ ರಾಜ್ಯದ ವಿವಿಧೆಡೆಯಿಂದ ಅರ್ಹ ಬಿಡ್ಡುದಾರರು ಭಾಗವಹಿಸಿದ್ದರು. ವಿಶೇಷ ಅಂದ್ರೆ ಮೂರು ಕಾರ್ಯದಡಿ ಮೊದಲ ಎರಡು ಕೆಲಸಗಳಿಗೆ ಬಹುತೇಕರು ಸಮನಾದ ಒಂದೇ ದರವನ್ನು ಮಂಡಿಸಿದ್ದರೆ, ಕಡೆಯ ಕಾರ್ಯಕ್ಕೆ ಒಬ್ಬೊಬ್ಬರು ಒಂದೊಂದು ದರ ನಮೂದಿಸಿದ್ದಾರೆ. ಈ ಪೈಕಿ ಒಂದು ಸಂಸ್ಥೆ ಮಾತ್ರ ಕೇವಲ 1 ರೂ. ನಮೂದಿಸಿ ಗಮನ ಸೆಳೆದಿದೆ. ಕ್ಲೀನಿಂಗ್ ಮೆಟಿರಿಯಲ್ಸ್ ಕಾರ್ಯದಡಿ ಪ್ರತಿ ತಿಂಗಳು ಹ್ಯಾಂಡ್ ಗ್ಲೌಸ್, ಪೊರಕೆ, ಪಿನಾಯಲ್, ಬ್ಲೀಚಿಂಗ್ ಪೌಡರ್, ಆಸಿಡ್ ಪೂರೈಸಬೇಕಾಗುತ್ತದೆ. ಇವಿಷ್ಟು ಕೆಲಸಕ್ಕ ಆ ಸಂಸ್ಥೆ ಮಾಸಿಕ 1 ರೂಪಾಯಿ ನಮೂದಿಸಿರುವುದು ಗಮನ ಸೆಳೆದಿದೆ. (ಆರ್.ಟಿ.ಐ ಮೂಲಕ ಈ ಸಂಬಂದ ಪಡೆದ ದಾಖಲೆ ಲಭಿಸಿದ್ದು ಅಲ್ಲಿ ಮಾಹಿತಿ ಬಹಿರಂಗಗೊಂಡಿದೆ ) ಈಗ ಮೈಸೂರು ಮೆಡಿಕಲ್ ಕಾಲೇಜು ಆಡಳಿತ ಮಂಡಳಿ ಮುಖ್ಯಸ್ಥರಿಗೆ ಇದೊಂದು ಸಂದಿಗ್ಧ ಸಂಗತಿಯಾಗಿದೆ. ಕಡಿಮೆ ದರ ನಮೂದಿಸಿದವರಿಗೆ ಟೆಂಡರ್ ನೀಡಬೇಕು ಎಂಬುದೇನೋ ನಿಜ. ಆದರೆ ಈ ರೀತಿ ಕೇವಲ 1 ರೂ. ನಮೂದಿಸಿರುವುದು ಅವರಲ್ಲೂ ಗೊಂದಲ ಮೂಡಿಸಿದೆ. ಎಂಎಂಸಿ ವ್ಯಾಪ್ತಿಗೆ ಒಳಪಡುವ ಹತ್ತಕ್ಕೂ ಹೆಚ್ಚು ಹಾಸ್ಟೆಲ್ ಗಳಿದ್ದು ಈ ಎಲ್ಲಾ ಹಾಸ್ಟೆಲ್ ಗಳ ನಿರ್ವಹಣೆ ಮಾಡಬೇಕಾಗಿದೆ. ಕೇವಲ 1 ರೂ.ಗೆ ಇದು ಸಾಧ್ಯವೆ ಎಂಬುದು ಯಕ್ಷ ಪ್ರಶ್ನೆ..? ಈ ಸಂಬಂಧ ಜಸ್ಟ್ ಕನ್ನಡ ಡಾಟ್ ಇನ್ ಜತೆ ಮಾತನಾಡಿದ ಮೈಸೂರು ಮೆಡಿಕಲ್ ಕಾಲೇಜಿನ ಡೀನ್ ಡಾ. ನಂಜರಾಜ್, ಈ ವಿಷಯವನ್ನು ಸರಕಾರದ ಗಮನಕ್ಕೆ ತರಲಾಗಿದೆ. ಅವರೇ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು. : ------