ಹಣದಿಂದಲೇ ಎಲ್ಲಾ ನಡೆಯುತ್ತೆ ಎನ್ನುವ ದುರಂಹಕಾರ ಒಳ್ಳೆಯದಲ್ಲ- ಸಚಿವ ಸಾರಾ ಮಹೇಶ್ ವಿರುದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ವಾಗ್ದಾಳಿ… ಕೆ.ಆರ್ ನಗರ,ಜೂ,1,2019(..): ಕೆ.ಆರ್ ನಗರ ಪುರಸಭೆಯಲ್ಲಿ ಜೆಡಿಎಸ್ ಸೋತ ಹಿನ್ನೆಲೆ ತಮ್ಮ ಸಮುದಾಯವನ್ನ ಕಡೆಗಣಿಸಲಾಗಿದೆ ಎಂದು ಆರೋಪಿಸಿ ತಮ್ಮ ಪಕ್ಷದ ನಾಯಕರೇ ಆದ ಸಚಿವ ಸಾ.ರಾ ಮಹೇಶ್ ವಿರುದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ. ಕೆ.ಆರ್ ನಗರ ಪುರಸಭೆಯಲ್ಲಿ ಜೆಡಿಎಸ್ ಸೋತ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರು ಜಿಲ್ಲೆ ಕೆ.ಆರ್ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹೆಚ್.ವಿಶ್ವನಾಥ್,ಕೆ.ಆರ್.ನಗರ ಪುರಸಭಾ ಚುನಾವಣೆಯಲ್ಲಿ ಜೆಡಿಎಸ್‌ನಿಂದ ನಮ್ಮ ಕುರುಬ ಸಮುದಾಯಕ್ಕೆ ಒಂದೇ ಒಂದು ಟಿಕೆಟ್ ಕೂಡ ನೀಡಿಲ್ಲ. ನಮ್ಮ ಸಮುದಾಯವನ್ನು ಕಡೆಗಣಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಸಚಿವ ಸಾ.ರಾ ಮಹೇಶ್ ವಿರುದ್ದ ಅಸಮಾಧಾನ ಹೊರ ಹಾಕಿರುವ ಹೆಚ್.ವಿಶ್ವನಾಥ್, ಹಣದಿಂದ ಜನರನ್ನ ಅಳೆಯಬೇಡಿ. ಅದರಿಂದ ಏನು ಆಗಲ್ಲ.ಹಣದಿಂದಲೇ ಎಲ್ಲವನ್ನೂ ಮಾಡುತ್ತೇವೆ ಎನ್ನುವ ದುರಂಹಕಾರ ಒಳ್ಳೆಯದಲ್ಲ. ನಮ್ಮನ್ನ ಆಳುವುದು ಜಾತಿ ಹಣ ಅಧಿಕಾರ ಅಲ್ಲ ಎಂದು ಕಿಡಿಕಾರಿದ್ದಾರೆ. ಪಕ್ಷದ ರಾಜ್ಯಾದ್ಯಕ್ಷನಾಗಿ ನಾನು ಹೇಳಿದ ಒಬ್ಬರಿಗೂ ಚುನಾವಣೆಯಲ್ಲಿ ಟಿಕೆಟ್ ನೀಡದೆ ದುರಹಂಕಾರದಿಂದ ವರ್ತಿಸಿದ್ದಾರೆ. ನನ್ನ ಮಾತನ್ನು ಧಿಕ್ಕರಿಸಿ ಬೇರೆಯವರಿಗೆ ಟಿಕೆಟ್ ಕೊಟ್ಟಿದ್ದಾರೆ. ಹಣ ಬಲವೇ ಮುಖ್ಯ ಎನ್ನುವ ಮನೋಭಾವವನ್ನು ಇನ್ನಾದರೂ ಬೀಡಿ. ನಿಮ್ಮ ಗೆಲುವಿಗೂ ನಮ್ಮ ಸಮುದಾಯ ಕಾರಣವಾಗಿದೆ. ಪಕ್ಷ ಬಿಟ್ಟು ಜೆಡಿಎಸ್ ಸೇರ್ಪಡೆಗೊಂಡಾಗ ನನ್ನ ಜತೆ ಬಂದ ಬೆಂಬಲಿಗರೆಲ್ಲರೂ ನಿಮಗೆ ಮತ ಹಾಕಿದ್ದಾರೆ. ಇದನ್ನ ನೀವು ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ ಸಾ.ರಾ ಮಹೇಶ್ ಚಿಕ್ಕವರಿದ್ದಾರೆ. ತಿದ್ದುಕೊಳ್ಳಲಿ ಎಂದು ಹೆಚ್.ವಿಶ್ವನಾಥ್ ಕಿವಿಮಾತು ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿದ್ದ ವೇಳೆ ಸಿದ್ದರಾಮಯ್ಯ ವಿರುದ್ದವೇ ತಿರುಗಿ ಬಿದ್ದಿದ್ದ ಹೆಚ್.ವಿಶ್ವನಾಥ್ ಇದೀಗ ಜೆಡಿಎಸ್ ಪಕ್ಷದಲ್ಲೂ ಸಹ ತಮ್ಮ ಪಕ್ಷದ ನಾಯಕರ ವಿರುದ್ದ ಅಸಮಾಧಾನ ಹೊರ ಹಾಕಿದ್ದಾರೆ. : . # # # # #.