ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ನಟನೆಯ ‘ಅಮರ್’ ರಾಜ್ಯಾದ್ಯಂತ ರಿಲೀಸ್… ಬೆಂಗಳೂರು,ಮೇ,31: ನಟ ದಿ. ರೆಬಲ್ ಸ್ಟಾರ್ ಅಂಬರೀಶ್ ಪುತ್ರ ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ಅಭಿನಯದ ಅಮರ್ ಚಿತ್ರ ಇಂದು ರಾಜ್ಯಾದ್ಯಂತ ರಿಲೀಸ್ ಆಗಿದೆ. ಅಭಿಷೇಕ್​ ಅಭಿನಯದ ‘ಅಮರ್’ ಸಿನಿಮಾಗೆ ಶುಭಹಾರೈಕೆಯ ಸುರಿಮಳೆಯಾಗುತ್ತಿದ್ದು, ಕನ್ನಡ, ತೆಲುಗು, ತಮಿಳು ಚಿತ್ರರಂಗದ ತಾರೆಯರು ಅಭಿಯ ಮೊಲದ ಪ್ರಯತ್ನಕ್ಕೆ ವಿಶ್​ ಮಾಡುತ್ತಿದ್ದಾರೆ. ಅಭಿಷೇಕ್ ಗೆ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್, ರಕ್ಷಿತ್​ ಶೆಟ್ಟಿ​ ಸಹ ವಿಶ್​ ಮಾಡಿದ್ದಾರೆ. ತಮ್ಮ ಮಗನನ್ನು ನಾಯಕನಾಗಿ ನೋಡಬೇಕು ಎಂಬ ಅಂಬರೀಶ್ ಆಸೆ ಈಡೇರಿದೆ. ಆದರೆ ಅದು ನನಸಾಗುವ ವೇಳೆ ಅವರೇ ಇಲ್ಲ. ’ ‘’ .