ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ಕಂಚಿನ ಪುತ್ಹಳಿ ಲೋಕಾರ್ಪಣೆ… ಬೆಂಗಳೂರು,ಮೇ,31: ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕಿಯಾದ ಪಾರ್ವತಮ್ಮ ರಾಜ್ ಕುಮಾರ್ ಅವರ ಕಂಚಿನ ಪುತ್ಥಳಿಯನ್ನ ಇಂದು ಲೋಕಾರ್ಪಣೆ ಮಾಡಲಾಗಿದೆ. ಬೆಂಗಳೂರಿನ ಯಡಿಯೂರು ವಾರ್ಡ್ ವ್ಯಾಪ್ತಿಯ ಡಾ. ಪಾರ್ವತಮ್ಮ ರಾಜ್ ಕುಮಾರ್ ರಸ್ತೆ ಹಾಗೂ ಸೌತ್ ಎಂಡ್ ವೃತ್ತ ಒಂದುಗೂಡುವ ಸ್ಥಳದಲ್ಲಿ ಪುತ್ಥಳಿ ನಿರ್ಮಿಸಲಾಗಿದ್ದು, ಡಿಸಿಎಂ ಡಾ. ಜಿ.ಪರಮೇಶ್ವರ್ ಪುತ್ಹಳಿಯನ್ನ ಲೋಕಾರ್ಪಣೆ ಮಾಡಿದರು. ಡಾ.ರಾಜ್ ಕುಟುಂಬದ ಅಪ್ಪಟ ಅಭಿಮಾನಿಯಾಗಿರುವ ಮಾಜಿ ಕಾರ್ಪೋರೇಟ್ ಎನ್ ಎಂ ರಮೇಶ್ ನೇತೃತ್ವದಲ್ಲಿ ಈ ಪ್ರತಿಮೆ ನಿರ್ಮಾಣವಾಗಿದೆ. ಇಂದು ಡಾ. ಪಾರ್ಮತಮ್ಮ ಅವರ ಎರಡನೆ ಪುಣ್ಯ ತಿಥಿ. ಈ ಪ್ರಯುಕ್ತ ಕಂಚಿನ ಪ್ರತಿಮೆಯನ್ನು ಲೋಕಾರ್ಪಣೆ ಮಾಡಲಾಗಿದೆ. .