ಸಂಸದ ಸ್ಥಾನಕ್ಕೆ ಪ್ರಜ್ವಲ್ ರಾಜೀನಾಮೆ ವಿಚಾರ: ಹೆಚ್.ಡಿಡಿ ಜತೆ ಚರ್ಚಿಸಿ ನಿರ್ಧಾರ ಎಂದ್ರು ಸಚಿವ ಹೆಚ್.ಡಿ ರೇವಣ್ಣ… ಹಾಸನ,ಮೇ,31,2019(..): ಸಂಸದ ಸ್ಥಾನಕ್ಕೆ ಪ್ರಜ್ವಲ್ ರೇವಣ್ಣ ರಾಜೀನಾಮೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಸಚಿವ ಹೆಚ್,ಡಿ ರೇವಣ್ಣ. ಈ ಬಗ್ಗೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಜತೆ ಚರ್ಚಿಸಿ ಅಂತಿಮ ನಿರ್ಧಾರ ಮಾಡುತ್ತೇವೆ ಎಂದು ಹೇಳಿದ್ದಾರೆ. ತುಮಕೂರು ಕ್ಷೇತ್ರದಲ್ಲಿ ಹೆಚ್.ಡಿ ದೇವೇಗೌಡರು ಸೋತ ಹಿನ್ನೆಲೆ ಹಾಸನ ಕ್ಷೇತ್ರವನ್ನ ತಾತ ಹೆಚ್.ಡಿ ದೇವೇಗೌಡರಿಗೆ ಬಿಟ್ಟುಕೊಡಲು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಪ್ರಜ್ವಲ್ ರೇವಣ್ಣ ಫಲಿತಾಂಶ ಬಂದ ಮಾರನೇ ದಿನ ಘೋಷಣೆ ಮಾಡಿದ್ದರು. ಇದೀಗ ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಹೆಚ್.ಡಿ ರೇವಣ್ಣ, ಹೆಚ್.ಡಿ ದೇವೇಗೌಡರ ಜತೆ ಈ ಕುರಿತು ಚರ್ಚಿಸುತ್ತೇವೆ. ಇನ್ನು ಸಮ್ಮಿಶ್ರ ಸರ್ಕಾರಕ್ಕೆ ಯಾವುದೇ ಧಕ್ಕೆ ಇಲ್ಲ. ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ ಎಂದರು. ಸ್ಥಳೀಯ ಸಂಸ್ಥೆ ಚುನಾವಣೆ ಬಗ್ಗೆ ಮಾತನಾಡಿದ ಅವರು, ಲೋಕಲ್ ಬಾಡಿ ಎಲೆಕ್ಷನ್ ಬಗ್ಗೆ ಅಲ್ಲಿನ ಮುಖಂಡರು ನೋಡಿಕೊಳ್ಳುತ್ತಾರೆ. ಆಲೂರಿನಲ್ಲಿ ನಮ್ಮ ಪಕ್ಷವೇ ಅಧಿಕಾರಕ್ಕೆ ಬರಲಿದೆ ಎಂದರು. : ’ ’ : - #: # # #