ಮದುವೆ ಸಮಾರಂಭ ಮುಗಿಸಿ ಬರುವಾಗ ಕಾರು ಅಪಘಾತ: ರೈತ ಮುಖಂಡ ಬಡಗಲಪುರ ನಾಗೇಂದ್ರ ಪಾರು… ಮೈಸೂರು,ಮೇ,31,2019(..): ಮದುವೆ ಸಮಾರಂಭ ಮುಗಿಸಿ ಬರುವಾಗ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಅವರ ಕಾರು ಅಪಘಾತಕ್ಕೀಡಾದ ಘಟನೆ ನಡೆದಿದೆ. ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮದುವೆ ಸಮಾರಂಭ ಮುಗಿಸಿ ಬರುವಾಗ ಈ ಘಟ‌ನೆ ನಡೆದಿದೆ. ನಿನ್ನೆ ರಾತ್ರಿ ಮಳೆ‌ ಬಂದಿದ್ದ ಕಾರಣ ಕಂಟ್ರೋಲ್ ಸಿಗದ ಕಾರು ಆಯತಪ್ಪಿ ರಸ್ತೆ ಪಕ್ಕದ ಹಳ್ಳಕ್ಕೆ ಬಿದ್ದು ಪಲ್ಟಿಯಾಗಿದೆ. ಬಡಗಲಪುರ ನಾಗೇಂದ್ರ ಅವರು ಘಟನೆಯಲ್ಲಿ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ನಾಗೇಂದ್ರ ಅವರ ಜೊತೆ ಉಪಾಧ್ಯಕ್ಷ, ಕಾರು ಚಾಲಕ ಕೂಡ ಸೇಫ್ ಆಗಿದ್ದಾರೆ. ಯಾರು ಭಯಪಡದಂತೆ ಬಡಗಲಪುರ ನಾಗೇಂದ್ರ ಸಂದೇಶ ರವಾನಿಸಿದ್ದಾರೆ. : : # #