ಅಭಿಷೇಕ್‌ ಅಭಿನಯದ ಅಮರ್‌ ಚಿತ್ರಕ್ಕೆ ಶುಭಕೋರಿಕೆ: ಮಂಡ್ಯ ಸೋಲಿನ ಹೊಣೆ ಹೊತ್ತ ನಿಖಿಲ್ ಕುಮಾರಸ್ವಾಮಿ.. ಮಂಡ್ಯ,ಮೇ, 30,2019(..): ನಟ ದಿ. ಅಂಬರೀಶ್ ಅವರ ಪುತ್ರ ಅಭಿಷೇಕ್‌ ಅಭಿನಯದ ಅಮರ್‌ ಸಿನಿಮಾ ನಾಳೆ ತೆರೆಕಾಣುತ್ತಿದ್ದು, ಸಿನಿಮಾಗೆ ಮಂಡ್ಯ ಲೋಕಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿಯವರು ಶುಭಕೋರಿದ್ದಾರೆ. ಇನ್ ಸ್ಟಾಗ್ರಾಮ್ ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ನಿಖಿಲ್ ಕುಮಾರಸ್ವಾಮಿ, ಮೊದಲ ಸಿನಿಮಾ ಅಂದ್ರೆ ಎಷ್ಟು ಒತ್ತಡವಿರುತ್ತದೆ ಅಂತಾ ಗೊತ್ತು. ಚಿತ್ರ ಯಶಸ್ಸು ಕಾಣಲಿ ಎಂದು ಶುಭ ಹಾರೈಸಿದ್ದಾರೆ. ಹಾಗೆಯೇ ಇದೇ ವೇಳೆ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಗೆಲುವು ಕಂಡಿರುವ ಸುಮಲತಾ ಅವರಿಗೂ ಅವರು ಶುಭಕೋರಿದ್ದಾರೆ. ಇನ್ನು ಮಂಡ್ಯ ಸೋಲಿನ ಹೊಣೆಯನ್ನ ತಾನೇ ಹೊತ್ತಿರುವ ನಿಖಿಲ್ ಕುಮಾರಸ್ವಾಮಿ, ನನ್ನ ಸೋಲಿಗೆ ನಾನೇ ಕಾರಣ. ಸಿಎಂ ಹೆಚ್.ಡಿ ಕುಮಾರಸ್ವಾಮಿ, ಹೆಚ್.ಡಿ ದೇವೇಗೌಡರು, ಶಾಸಕರು, ಪರಿಷತ್ ಸದಸ್ಯರು ಅಲ್ಲ. ಮಂಡ್ಯದ ಜನತೆ ನಿಖಿಲ್ ನನ್ನ ತಿರಸ್ಕರಿಸಿದ್ದಾರೆ. ಹೀಗಾಗಿ ನನ್ನ ಸೋಲಿನ ಹೊಣೆ ನಾನೇ ಹೊರುತ್ತೇನೆ ಎಂದು ಇನ್ ಸ್ಟಾಗ್ರಾಮ್ ನಲ್ಲಿ ಹಾಕಿದ್ದಾರೆ. ಮಂಡ್ಯ ಜಿಲ್ಲೆಯ ಅಭಿವೃದ್ದಿಯ ದೃಷ್ಟಿಯಿಂದ ನಾವು ಎಲ್ಲರೂ ಕೈಜೋಡಿಸಬೇಕಾಗಿದೆ. ನಾನು ಪಡೆದಿರುವ 5 ಲಕ್ಷ 76 ಸಾವಿರದ 400 ಓಟುಗಳನ್ನು ಕೊಟ್ಟವರಿಗೂ, ಕೊಡದವರಿಗೂ ನಾನು ಧನ್ಯವಾದಗಳನ್ನು ಹೇಳ ಬಯುಸುವೆ. ಮುಂದೆ ಕೂಡ ಮಂಡ್ಯದ ಜನರ ಜೊತೆಗೆ ನಾನು ಇರುವೆ ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ. : . # # # # #