ಅಭಿಷೇಕ್ ’ಅಮರ್’ ಚಿತ್ರಕ್ಕೆ ಶುಭ ಕೋರಿದ ನಿಖಿಲ್ ಕುಮಾರಸ್ವಾಮಿ ಬೆಂಗಳೂರು:ಮೇ-30:(..) ರೆಬಲ್​​ಸ್ಟಾರ್​​ ಅಂಬರೀಷ್​​​ ಪುತ್ರ ಅಭಿಷೇಕ್​​ ಅಂಬರೀಷ್​​​​​​​​​ ಅವರ ಅಮರ್​​ ಚಿತ್ರ ಮೇ 31 ರಂದು ಬಿಡುಗಡೆಯಾಗಲಿದ್ದು, ನಿಖಿಲ್​​ ಅವರಿಗೆ ಶುಭಾಶಯ ಕೋರಿದ್ದಾರೆ. ಈ ಕುರಿತು ಸೋಶಿಯಲ್ ಮೀಡಿಯಾ ಇನ್ ಸ್ಟಾಗ್ರಾಂ ನಲ್ಲಿ ಬರೆದುಕೊಮ್ಡಿರುವ ನಿಖಿಲ್, ನಾಳೆ, ಅಂದರೆ ಮೇ 31, 2019ರಂದು ಅಭಿಷೇಕ್ ನಾಯಕತ್ವದ ಅಮರ್ ಚಿತ್ರವು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಇದು ಅಭಿಷೇಕ್ ನಾಯಕತ್ವದ ಮೊದಲ ಚಿತ್ರವಾಗಿದ್ದು, ಅವರಿಗೆ ಶುಭವಾಗಲಿ ಎಂದು ಹೇಳಿದ್ದಾರೆ. ಇದೇ ವೇಳೆ ಮಂಡ್ಯ ರಾಜಕರಣದ ಬಗ್ಗೆ ಮಾತನಾಡಿರುವ ಅವರು ನೂತನ ಸಂಸದೆ ಸುಮಲತಾ ಅಂಬರೀಷ್​​ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ತಮ್ಮ ಸೋಲಿನ ಕುರಿತಾಗಿ ​ನನ್ನ ಸೋಲಿಗೆ ನಾನು ಹೊಣೆ. ಯಾವುದೇ ಶಾಸಕರು, ಎಂಎಲ್​​ಸಿ, ಮುಖ್ಯಮಂತ್ರಿ ಹಾಗೂ ಜೆಡಿಎಸ್​​​​​​ ಮುಖ್ಯಸ್ಥ ದೇವೇಗೌಡರು ಯಾರು ಹೊಣೆಯಲ್ಲ ಎಂದು ತಮ್ಮ ಸೋಲನ್ನು ಪರಾಮರ್ಶಿಸಿಕೊಂಡಿದ್ದಾರೆ. ಮಂಡ್ಯ ಜನತೆ ನಿಖಿಲ್​​ ಕುಮಾರಸ್ವಾಮಿಯನ್ನು ತಿರಸ್ಕರಿಸಿದ್ದಾರೆ. ಕಾರ್ಯಕರ್ತರ ನಿರೀಕ್ಷೆಯನ್ನು ಹುಸಿ ಮಾಡಿರುವುದಕ್ಕೆ ಅವರಿಗೆ ಕ್ಷಮೆ ಕೋರುತ್ತೇನೆ. ಮುಂದಿನ ದಿನಗಳಲ್ಲಿ ಮಂಡ್ಯ ಜನರ ಅಭಿವೃದ್ಧಿಗೆ ಶ್ರಮಿಸುತ್ತೇನೆ. ರಾಜ್ಯದ್ಯಾಂತ ಪ್ರವಾಸ ಕೈಗೊಂಡು ಜನರ ಕಷ್ಟ-ಸುಖಗಳನ್ನು ಅರಿಯುವ ಪ್ರಯತ್ನ ಮಾಡುತ್ತೇನೆ. ಈ ಬಗ್ಗೆ ಶೀಘ್ರದಲ್ಲಿ ಸುದ್ದಿಗೋಷ್ಠಿ ನಡಸಿ ಮುಂದಿನ ಯೋಜನೆಯಗಳ ಕುರಿತು ಸಂಪೂರ್ಣ ಮಾಹಿತಿ ಪಡೆದುಕೊಳ್ಳುತ್ತೇನೆ ಎಂದು ನಿಖಿಲ್​​ ತಿಳಿಸಿದ್ದಾರೆ.