ಕೇಂದ್ರ ಸಂಪುಟದಲ್ಲಿ ಮತ್ತೆ ಸಚಿವರಾಗುತ್ತಿರುವ ಡಿವಿ ಸದಾನಂದಗೌಡರರಿಗೆ ಷರತ್ತು ಹಾಕಿದ ಬಿಎಸ್ ಯಡಿಯೂರಪ್ಪ… ನವದೆಹಲಿ, ಮೇ 30,2019(..): ಕೇಂದ್ರ ಸಚಿವ ಸಂಪುಟದಲ್ಲಿ ಮತ್ತೆ ಸ್ಥಾನ ಗಿಟ್ಟಿಸಿಕೊಂಡಿರುವ ಸಂಸದ ಡಿ.ವಿ ಸದಾನಂದಗೌಡರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಆಶೀರ್ವಾದ ಮಾಡಿ ಷರತ್ತೊಂದನ್ನ ಹಾಕಿದ್ದಾರೆ. ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸಿ ಜಯ ಸಾಧಿಸಿರುವ ಡಿ.ವಿ.ಸದಾನಂದ ಗೌಡ ಅವರು ಮತ್ತೆ ಕೇಂದ್ರಸಚಿವರಾಗುತ್ತಿದ್ದು ಇಂದು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ನಡುವೆ ನವದೆಹಲಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರನ್ನ ಡಿವಿ ಸದಾನಂದಗೌಡರು ಭೇಟಿಯಾಗಿ ಆಶೀರ್ವಾದ ಪಡೆದರು. ಆಶೀರ್ವಾದ ಮಾಡುವ ವೇಳೆ ಬಿ.ಎಸ್.ಯಡಿಯೂರಪ್ಪ ಅವರು ಸದಾನಂದ ಗೌಡರಿಗೆ ಷರತ್ತನ್ನು ಹಾಕಿದ್ದಾರೆ. ಕೇಂದ್ರ ಸಚಿವರಾಗಿ ನೀವು ಅನಂತ್ ಕುಮಾರ್ ಅವರ ಸ್ಥಾನ ತುಂಬಬೇಕು. ರಾಜ್ಯದ ಜನರಿಗೆ ದೆಹಲಿಯಲ್ಲಿ ಸ್ಪಂದಿಸಿ. ಅನಂತ್ ಕುಮಾರ್ ಅವರಂತೆ ಕೆಲಸ ಮಾಡಿ ಎಂದು ಸೂಚಿಸಿದ್ದಾರೆ ಎನ್ನಲಾಗಿದೆ. ಇನ್ನು ಬಿಎಸ್ ಯಡಿಯೂರಪ್ಪ ಷರತ್ತಿಗೆ ಒಪ್ಪಿಗೆ ನೀಡಿರುವ ಸದಾನಂದ ಗೌಡರು ಷರತ್ತಿನಂತೆ ಕೆಲಸ ಮಾಡುವುದಾಗಿ ಭರವಸೆ ನೀಡಿದ್ದಾರೆ. : . # # # #.