2ನೇ ಬಾರಿಗೆ ದೇಶದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಲಿರುವ ನರೇಂದ್ರ ಮೋದಿಗೆ ಹೆಚ್.ವಿಶ್ವನಾಥ್ ಶುಭಹಾರೈಕೆ.. ಮೈಸೂರು,ಮೇ,30,2019(..): ದೇಶದ 15ನೇ ಪ್ರಧಾನಿಯಾಗಿ ನರೇಂದ್ರ ಮೋದಿ ಇಂದು ಅಧಿಕಾರ ಸ್ವೀಕರಿಸುತ್ತಿದ್ದು, ನರೇಂದ್ರ ಮೋದಿ ಅವರಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ಶುಭಹಾರೈಸಿದ್ದಾರೆ. ಎರಡನೇ ಬಾರಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸುತ್ತಿರುವ ನರೇಂದ್ರ ಮೋದಿ ಅವರಿಗೆ ಹೆಚ್.ವಿಶ್ವನಾಥ್ ಟ್ವಿಟ್ಟರ್ ನಲ್ಲಿ ಶುಭಕೋರಿದ್ದಾರೆ. ಭಾರತದ ಎಲ್ಲಾ ಜಾತಿ ಜನಾಂಗ ಧರ್ಮ ಭಾಷಿಕರಣ ಆಶಯಗಳಂತೆ ಒಂದಾಗಿ ಎಲ್ಲರ ಭವಿಷ್ಯದ ಬಲ ಭೀಮನಾಗಿ ಮೋದಿ ಹೆಜ್ಜೆಯಾಕಲಿ. ಜಾಗತಿಕ ಜಗತ್ತಿನ ಅತ್ಯಂತ ಎತ್ತರದ ಜನತಂತ್ರ ವ್ಯವಸ್ಥೆಯನ್ನು ಒಪ್ಪಿ ಅಪ್ಪಿ ಆಡಳಿತ ಆಡಳಿತ ನಡಿಸುತ್ತಿರೋ 71 ವರ್ಷಗಳ ಕಾಲದಿಂದ ಸ್ವತಂತ್ರ ಸಂರಕ್ಷಿಸಿ ಮುನ್ನುಗ್ಗುತ್ತಿರೋ ಭಾರತದ ಪ್ರಧಾನಮಂತ್ರಿಯಾಗಿ 2 ನೇ ಬಾರಿ ಅಧಿಕಾರ ಸ್ವೀಕರಿಸುತ್ತಿರೋ ನಿಮಗೆ ಭಾರತ ಕೋಟಿ ಜನರ ಶುಭಕಾಮನೆಗಳು ಎಂದು ಹೆಚ್.ವಿಶ್ವನಾಥ್ ತಿಳಿಸಿದ್ದಾರೆ. ಇಂದು ಸಂಜೆ 7ಗಂಟೆಗೆ ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದು ಇವರ ಜತೆ ಸಚಿವರು ಸಹ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. : . . #. # # #