ಕ್ರಿಕೆಟ್: ಇಂದು ವಿಶ್ವಕಪ್ ಮಹಾಸಮರಕ್ಕೆ ಚಾಲನೆ ಇಂಗ್ಲೆಂಡ್: , ಮೇ 30, 2019 (..): ಇಂದು ವಿಶ್ವಕಪ್ ಮಹಾಸಮರಕ್ಕೆ ಚಾಲನೆ ಸಿಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡ ದಕ್ಷಿಣ ಆಫ್ರಿಕಾ ತಂಡಕ್ಕೆ ಸವಾಲೆಸೆಯುತ್ತಿದೆ. ನೂರಾರು ಕೋಟಿ ಅಭಿಮಾನಿಗಳ ನಿರೀಕ್ಷೆಯನ್ನ ಹೊತ್ತಿರುವ ಟೀಮ್ ಇಂಡಿಯಾ, ದಕ್ಷಿಣ ಆಫ್ರಿಕಾ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದೆ. ಒಟ್ಟು 46 ದಿನಗಳ ಕಾಲ ನಡೆಯುಲಿದೆ ಕ್ರಿಕೆಟ್ ಯುದ್ಧ. ಕಳೆದ 2015ರ ವಿಶ್ವಕಪ್​​ನಲ್ಲಿ ಭಾರತ ಸೆಮಿಫೈನಲ್​​ನಲ್ಲಿ ನಿರಾಸೆ ಅನುಭವಿಸಿ ವಿಶ್ವಕಪ್​​ ಅನ್ನು ಕಾಂಗರೂಗಳಿಗೆ ಬಿಟ್ಟುಕೊಟ್ಟಿತು. ಇದೀಗ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಪೈಪೋಟಿ ನೀಡಲು ಟೀಮ್ ಇಂಡಿಯಾ ಸಜ್ಜಾಗಿದೆ.