ಹಣ ದುಪ್ಪಟ್ಟು ಮಾಡುವುದಾಗಿ ನಂಬಿಸಿ ಕೋಟ್ಯಾಂತರ ರೂ ದೋಚಿ ವ್ಯಕ್ತಿ ಪರಾರಿ… ಬೆಂಗಳೂರು,ಮೇ,30,2019(..): ವ್ಯಕ್ತಿಯೋರ್ವ ಹಣ ದುಪ್ಪಟ್ಟು ಮಾಡುವುದಾಗಿ ಜನರನ್ನ ನಂಬಿಸಿ ಕೋಟ್ಯಾಂತರ ರೂಪಾಯಿ ಸಂಗ್ರಹಿಸಿ ಬಳಿಕ ಜನರಿಗೆ ಟೋಪಿ ಹಾಕಿ ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಟಿಸಿ ಪಾಳ್ಯ ಜನರೇ ಮೋಸ ಹೋಗಿರುವುದು. ಮಂಜುನಾಥ್ ಎಂಬಾತನೇ ಈ ರೀತಿ ವಂಚನೆ ಮಾಡಿರುವುದು. ಈತ ಹಣ ದುಪ್ಪಟ್ಟು ಮಾಡುವುದಾಗಿ ಟಿಸಿ ಪಾಳ್ಯದ ಜನರನ್ನ ನಂಬಿಸಿದ್ದಾನೆ. ಮೊದಲು ಕಡಿಮೆ ಹಣ ಪಡೆದು ದುಪ್ಪಟ್ಟು ಹಣ ನೀಡುತ್ತಿದ್ದ ಮಂಜುನಾಥ್ ನಂತರ ದೊಡ್ಡ ಮೊತ್ತದ ಹಣ ಪಡೆದು ಕೋಟ್ಯಾಂತರ ರೂಪಾಯಿ ಸಂಗ್ರಹಿಸಿ ಇದೀಗ ಪರಾರಿಯಾಗಿದ್ದಾನೆ. ಈ ಕುರಿತು ಆತನ ಹೆಂಡತಿಗೆ ತಿಳಿದಿದ್ದು ಪತ್ನಿ ಮೈಕೋಲೇಔಟ್ ಪೊಲೀಸ್ ಠಾಣೆಗೆ ನಾಪತ್ತೆ ದೂರು ದಾಖಲಿಸಿದ್ದಾರೆ. ಹಣ ವಂಚನೆ ಆರೋಪದಲ್ಲಿ ಟಿಸಿ ಪಾಳ್ಯ ಜನರು ಕೆ.ಆರ್ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ಮಂಜುನಾಥ್ ಗಾಗಿ ಪೊಲೀಸರು ಬಲೆ ಬೀಸಿದ್ದಾರೆ. : . # # #