ತಮಿಳುನಾಡಿಗೆ ನೀರು ಬಿಡುವಂತೆ ಪ್ರಾಧಿಕಾರ ಆದೇಶ ವಿಚಾರ: ಜಲಸಂಪನ್ಮೂಲ ಸಚಿವ ಡಿ.ಕೆ ಶಿವ ಕುಮಾರ್ ಪ್ರತಿಕ್ರಿಯಿಸಿದ್ದು ಹೀಗೆ….? ಬೆಂಗಳೂರು,ಮೇ,28,2019(..): ತಮಿಳುನಾಡಿಗೆ 9.19 ಟಿಎಂಸಿ ನೀರು ಬಿಡುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನೀಡಿರುವ ಆದೇಶ ಕುರಿತು ಪ್ರತಿಕ್ರಿಯಿಸಿರುವ ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್,ಪ್ರಾಧಿಕಾರ ಕೊಟ್ಟ ತೀರ್ಪಿಗೆ ಗೌರವ ಕೊಡ್ತೇವೆ . ಅಗತ್ಯವಿದ್ದರೇ ಸರ್ವ ಪಕ್ಷ ಸಭೆ ಕರೆದು ಚರ್ಚೆ ನಡೆಸುತ್ತೇವೆ ಎಂದು ಹೇಳಿದ್ದಾರೆ. ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ಸಚಿವ ಡಿ.ಕೆ ಶಿವಕುಮಾರ್, ಈ ಬಗ್ಗೆ ಪ್ರಾಧಿಕಾರದ ಅಧಿಕಾರಿಗಳ ಜತೆ ಚರ್ಚಿಸಿದ್ದೇವೆ. ಜಲಾಶಯಗಳಿಗೆ ಒಳಹರಿವು ಬಂದರೇ ಮಾತ್ರ ನೀರು ಬಿಡಿ ಎಂದು ಪ್ರಾಧಿಕಾರ ಆದೇಶ ನೀಡಿದೆ. ಈ ಬಗ್ಗೆ ಯಾವುದೇ ತಕರಾರು ಇಲ್ಲ. ಜಲಾಶಯಗಳಿಗೆ ಒಳಹರಿವು ಬರುವ ವಿಶ್ವಾಸವಿದೆ. ರಾಜ್ಯದ ಹಿತ ಮತ್ತು ನ್ಯಾಯಾಲಯದ ಹಿತ ಎರಡನ್ನೂ ಕಾಯುತ್ತೇವೆ ಎಂದರು. ಇನ್ನು ಈ ಬಗ್ಗೆ ಸಂಸತ್ ನಲ್ಲಿ ಬಿಜೆಪಿಯ ಧ್ವನಿ ಶಕ್ತಿ ಎಷ್ಟಿದೆ ಅಂತಾ ನೋಡೋಣ. ಏನಾದ್ರೂ ಸಮಸ್ಯೆಯಾಗಿ ನೀರಿಲ್ಲ ಅಂದರೇ ಎಲ್ಲಾ ಪಕ್ಷಗಳ ಸಭೆ ಕರೆದು ಚರ್ಚಿಸಿ ತೀರ್ಮಾನ ಮಾಡುತ್ತೇವೆ ಎಂದು ಸಚಿವ ಡಿ.ಕೆ ಶಿವಕುಮಾರ್ ತಿಳಿಸಿದರು. : ’ # # #