ನಾನು ಪ್ರಕಾಶ್ ರೈ ಅಭಿಮಾನಿ- ನಟ ಪ್ರಕಾಶ್ ರೈ ಬಗ್ಗೆ ಪ್ರೀತಿಯ ಮಾತುಗಳನ್ನಾಡಿದ ಸಂಸದ ಪ್ರತಾಪ್‌ ಸಿಂಹ…. ಮೈಸೂರು,ಮೇ,28,2019(..): ಬಹುಭಾಷಾ ನಟ ಪ್ರಕಾಶ್ ರೈ ವಿರುದ್ದ ಪದೇ ಪದೇ ಕಿಡಿಕಾರುತ್ತಿದ್ದ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಇದೀಗ ಪ್ರಕಾಶ್ ರೈ ಕುರಿತು ಪ್ರೀತಿಯ ಮಾತುಗಳನ್ನಾಡಿದ್ದಾರೆ. ನಾನು ಪ್ರಕಾಶ್ ರೈ ಅಭಿಮಾನಿ.. ಎಲ್ಲರಿಗು ಸೋಲಿನ ನೋವು ಇರುತ್ತದೆ. ಪ್ರಕಾಶ್ ರೈ ಅವರಿಗೆ ಆಗಿರುವ ಸೋಲು ರಾಜಕೀಯ ಜೀವನಕ್ಕೆ ಹಿನ್ನಡೆ ಇರಬಹುದು. ಆದ್ರೆ ಅವರ ಚಿತ್ರರಂಗದ ಜೀವನಕ್ಕೆ ಶುಭವಾಗಲಿ ಅಂತ ಹಾರೈಸುತ್ತೇನೆ ಎಂದು ಸಂಸದ ಪ್ರತಾಪ್ ಸಿಂಹ ಅಚ್ಚರಿಯ ಮಾತುಗಳನ್ನಾಡಿದ್ದಾರೆ. ಮೈಸೂರಿನಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ನಟನೆಯ ವಿಚಾರದಲ್ಲಿ ಪ್ರಕಾಶ್ ರೈ ಅವರು ದೊಡ್ಡ ಸಾಧನೆ ಮಾಡಿದ್ದಾರೆ. ಅವರ ನಟನೆಗೆ ನಾನು ಅಭಿಮಾನಿ. ಆದ್ರೆ ಅವರ ಸೈದ್ದಾಂತಿಕ ವಿಚಾರಗಳಿಗೆ ನಮ್ಮ ವಿರೋಧ ಇದೆ. ಮೋದಿ, ಅಮೀತ್ ಷಾ ಬಗ್ಗೆ ಅವರು ಸಭ್ಯತೆ ಮೀರಿ ಮಾತನಾಡಿದ್ರು. ಆಗ ನಾನು ಕಟುವಾಗಿ ಟೀಕಿಸಿದ್ದೆ. ಈಗ ಅವರು ಚುನಾವಣೆ ನಿಂತು ಸೋತಿದ್ದಾರೆ‌. ಅವರ ಸೋಲಿನ ನೋವು ಅವರಿಗೆ ಮಾತ್ರ ಗೊತ್ತಿರುತ್ತೆ. ಹೀಗಾಗಿ ಈ ಸಂದರ್ಭದಲ್ಲಿ ಅವರ ಮುಂದಿನ ಭವಿಷ್ಯಕ್ಕೆ ಶುಭ ಹಾರೈಸುತ್ತೇನೆ ಎಂದು ಹಾರೈಸಿದರು. ಲೋಕಸಭಾ ಚುನಾವಣೆಗೂ ಮುನ್ನ ಪ್ರತಾಪ್‌ಸಿಂಹ ವಿರುದ್ದ ಪ್ರಕಾಶ್ ರೈ 1ರೂ ಮಾನನಷ್ಟ ಮೊಕದ್ದಮೆ ಹಾಕಿದ್ದರು. ಪ್ರತಾಪ್‌ಸಿಂಹ ಚಾಲೆಂಜ್‌ ಗಾಗಿಯೇ ಪ್ರಕಾಶ್ ರೈ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಆದರೆ ಚುನಾವಣೆಯಲ್ಲಿ ಪ್ರಕಾಶ್ ರೈ ಸೋಲನ್ನಪ್ಪಿದ್ದಾರೆ. ಇನ್ನು ಪ್ರಕಾಶ್ ರೈ ರನ್ನ ಟೀಕಿಸುತ್ತಿದ್ದ ಪ್ರತಾಪ್ ಸಿಂಹ ಇದೀಗ ಚುನಾವಣೆ ನಂತರ ವರಸೆ ಬದಲಾಯಿಸಿಕೊಂಡು ಪ್ರಕಾಶ್ ರೈ ಬಗ್ಗೆ ಪ್ರೀತಿಯ ಮಾತುಗಳನ್ನಾಡಿದ್ದಾರೆ. : - , # # # #