ಐಪಿಎಸ್ ಹುದ್ದೆಗೆ ರಾಜೀನಾಮೆ ಸಲ್ಲಿಸಿದ ಖಡಕ್ ಅಧಿಕಾರಿ ಅಣ್ಣಾಮಲೈ… ಬೆಂಗಳೂರು,ಮೇ,28,2019(..): ನಿನ್ನೆಯಿಂದ ಹಬ್ಬಿದ್ದ ರಾಜೀನಾಮೆ ಸುದ್ದಿಗೆ ಇಂದು ಖುದ್ದು ಅಣ್ಣಾಮಲೈ ಸ್ಪಷ್ಟನೆ ನೀಡಿದ್ದು ಐಪಿಎಸ್ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಆ ಮೂಲಕ ಕಳೆದ ಕೆಲ ಸಮಯದಿಂದ ುದ್ಭವಿಸಿದ್ದ ಕುತೂಹಲಕ್ಕೆ ತೆರೆ ಎಳೆದಿದ್ದಾರೆ. ಈ ಸಂಬಂಧ ಿಂದು ಪೊಲೀಸ್ ಮಹಾನಿರ್ದೇಶಕರಿಗೆ ಡಿಸಿಪಿ ಅಣ್ಣಾಮಲೈ ರಾಜೀನಾಮೆ ಪತ್ರ ರವಾನಿಸಿದ್ದಾರೆ. ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಅವರು, ಹಿರಿಯ ಅಧಿಕಾರಿ ವಿವರಣೆ ಕೇಳಿದರೇ ಹೋಗಿ ನೀಡಲು ಸಿದ್ಧ ಎಂದು ಸ್ಪಷ್ಟಪಡಿಸಿರುವ ಅಣ್ಣಾಮಲೈ, ರಾಜೀನಾಮೆಗೆ ಸಂಬಂಧಿಸಿದ ಸಂಪೂರ್ಣ ವಿವರಗಳನ್ನ ಸದ್ಯದಲ್ಲೇ ಎಲ್ಲರ ಜತೆ ಹಂಚಿಕೊಳ್ಳುವೆ ಎಂದು ಆಶ್ವಾಸನೆ ನೀಡಿದರು. ದಕ್ಷ ಐಪಿಎಸ್ ಅಧಿಕಾರಿ‌ ಬೆಂಗಳೂರು ಡಿಸಿಪಿ ಅಣ್ಣಾಮಲೈ ಅವರು ಹುದ್ದೆಗೆ ರಾಜೀನಾಮೆ ನೀಡಿ ರಾಜಕೀಯಕ್ಕೆ ಸೇರಲಿದ್ದಾರೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಹರಿದಾಡಿತ್ತು. ಟಫ್ ಕಾಪ್ ಎಂದೆನಿಸಿರುವ ಅಣ್ಣಾಮಲೈ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ಪಡೆದಿದ್ದಾರೆ. ತಮಿಳುನಾಡು ಮೂಲದ ಇವರು ಆ ರಾಜ್ಯದಲ್ಲಿ ರಾಜಕೀಯ ಪ್ರವೇಶಿಸುವ ಇಂಗಿತ ಹೊಂದಿರುವ ಬಗ್ಗೆ ಮಾಧ್ಯಮಗಳು ವರದಿ ಮಾಡಿದ್ದವು. : # # #