ಸಚಿವ ಸಂಪುಟದಲ್ಲಿ ಸ್ಥಾನ ಪಡೆಯಲು ಮತ್ತೊಬ್ಬ ಶಾಸಕ ಕಸರತ್ತು… ಬೆಂಗಳೂರು,ಮೇ,28,2019(..): ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗದಿದ್ದಕ್ಕೆ ಅಸಮಾಧಾನಗೊಂಡಿರುವ ಅತೃಪ್ತ ಶಾಸಕರನ್ನ ಸಮಾಧಾನಪಡಿಸಲು ಅತೃಪ್ತರಿಗೆ ಮೈತ್ರಿ ಪಕ್ಷದ ನಾಯಕರು ಸಚಿವ ಸ್ಥಾನದ ಆಫರ್ ನೀಡುತ್ತಿದ್ದಾರೆ. ಈ ನಡುವೆ ಸಚಿವ ಸಂಪುಟದಲ್ಲಿ ಸ್ಥಾನ ಪಡೆಯಲು ಇದೀಗ ಮತ್ತೊಬ್ಬ ಶಾಸಕ ಎಂಟ್ರಿ ಕೊಟ್ಟಿದ್ದಾರೆ. ಹೌದು ಕಲ್ಬುರ್ಗಿ ಜಿಲ್ಲೆ ಜೇವರ್ಗಿ ಶಾಸಕ ಅಜಯ್ ಸಿಂಗ್ ಸಹ ತನಗೂ ಸಚಿವ ಸ್ಥಾನ ನೀಡುವಂತೆ ಹೈಕಮಾಂಡ್ ಗೆ ಒತ್ತಾಯಿಸಿದ್ದಾರೆ ಎನ್ನಲಾಗಿದೆ. ದೆಹಲಿ ವಿಶೇಷ ಪ್ರತಿನಿಧಿಯಾಗಿರುವ ಅಜಯ್ ಸಿಂಗ್ ತಮಗೂ ಸಂಪುಟದಲ್ಲಿ ಸ್ಥಾನ ನೀಡುವಂತೆ ಕೈ ನಾಯಕರಿಗೆ ಆಗ್ರಹಿಸಿದ್ದಾರೆ. ಈ ಹಿನ್ನೆಲೆ ನಿನ್ನೆಯೇ ಅಜಯ್ ಸಿಂಗ್ ಬೆಂಗಳೂರಿಗೆ ಆಗಮಿಸಿದ್ದಾರೆ. ಅತೃಪ್ತ ಶಾಸಕರನ್ನ ಸಮಾಧಾನಪಡಿಸಲು ಸಚಿವ ಸ್ಥಾನದ ಆಫರ್ ನೀಡುತ್ತೀರಿ. ಪಕ್ಷದ ನಿಷ್ಟಾವಂತರನ್ನ ಕಡೆಗಣಿಸದೆ ಪರಿಗಣಿಸಿ ಎಂದು ಕಾಂಗ್ರೆಸ್ ನಾಯಕರಿಗೆ ಒತ್ತಡ ಹೇರಿದ್ದಾರೆ ಎನ್ನಲಾಗಿದೆ. : . # # # #