ತೆಲುಗಿನಲ್ಲಿ ಮಿಂಚುತ್ತಿರುವ ರಶ್ಮಿಕಾ ಸಂಭಾವನೆ ಈಗ ದುಪ್ಪಟ್ಟು ! ಬೆಂಗಳೂರು, ಮೇ 28, 2019 (..): ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಚಿತ್ರದ ಸಂಭಾವನೆ ಇದೀಗ ಡಬಲ್ ಆಗಿದೆ. ಕಿರಿಕ್ ಪಾರ್ಟಿ ಬಳಿಕ ಪರಭಾಷಾ ಚಿತ್ರರಂಗದಲ್ಲೇ ಹೆಚ್ಚು ಮಿಂಚುತ್ತಿರುವ ವಿಜಯ ದೇವರಕೊಂಡ ಜೊತೆಗಿನ ಗೀತ ಗೋವಿಂದಂ ಚಿತ್ರದಲ್ಲಿ ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ ಆ ಬಳಿಕ ಟಾಲಿವುಡ್ ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆಯೂರಿದ್ದಾರೆ. ಅಲ್ಲು ಅರ್ಜುನ್, ಮಹೇಶ್ ಬಾಬು, ಕಾರ್ತಿ, ನಿತಿನ್ ಅವರ ಜೊತೆಗೂ ರಶ್ಮಿಕಾ ಮಂದಣ್ಣ ಅವಕಾಶ ಗಿಟ್ಟಿಸಿಕೊಂಡಿದ್ದು, ತಮಿಳು ಚಿತ್ರರಂಗವೂ ಅವರನ್ನು ಕೈಬೀಸಿ ಕರೆಯುತ್ತಿದೆ. ಹೀಗಾಗಿಯೇ ಹೆಚ್ಚುತ್ತಿರುವ ಬೇಡಿಕೆಯ ಹಿನ್ನಲೆಯಲ್ಲಿ ರಶ್ಮಿಕಾ ಮಂದಣ್ಣ ಅವರ ಸಂಭಾವನೆ 40 ಲಕ್ಷ ರೂಪಾಯಿಗಳಿಂದ 80 ಲಕ್ಷ ರೂಪಾಯಿಗಳಿಗೆ ಏರಿಕೆಯಾಗಿದೆ.