ಮದುವೆಗೆ ಒಪ್ಪದ ಹಿನ್ನೆಲೆ: ಪ್ರೇಯಸಿ ತಂದೆ ಮೇಲೆ ಗುಂಡು ಹಾರಿಸಿದ ಯೋಧ… ದಾವಣಗೆರೆ,ಮೇ,25,2019(..): ಮದುವೆಗೆ ಒಪ್ಪದ ಪ್ರೇಯಸಿಯ ತಂದೆ ಮೇಲೆ ಪ್ರಿಯಕರ ಯೋಧ ಗುಂಡು ಹಾರಿಸಿರುವ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ. ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಬಿದರಗಟ್ಟ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಯೋಧ ದೇವರಾಜ್ ಎಂಬುವವರೇ ಪ್ರೇಯಸಿ ತಂದೆ ಪ್ರಕಾಶ್ ಮೇಲೆ ಗುಂಡು ಹಾರಿಸಿದ್ದಾರೆ. ಗಾಯಗೊಂಡಿರುವ ಪ್ರಕಾಶ್ ರನ್ನ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಿದರಗಟ್ಟೆ ಗ್ರಾಮದ ಪ್ರಕಾಶ್ ಎಂಬುವರ ಮಗಳನ್ನು ಯೋಧ ದೇವರಾಜ್ ಪ್ರೀತಿಸುತ್ತಿದ್ದರು. ನಿನ್ನೆಯಷ್ಟೇ ರಜೆ ಮೇಲೆ ಬಂದಿದ್ದ ದೇವರಾಜ್ ತಮ್ಮ ಪ್ರೀತಿಯ ವಿಷಯವನ್ನು ಪ್ರೇಯಸಿಯ ತಂದೆ ಪ್ರಕಾಶ್ ಅವರಿಗೆ ತಿಳಿಸಿದ್ದಾರೆ. ಆದರೆ ಈ ಪ್ರೀತಿಗೆ ಪ್ರೇಯಸಿ ತಂದೆ ಪ್ರಕಾಶ್ ವಿರೋಧ ವ್ಯಕ್ತಪಡಿಸಿ ಮದುವೆಗೆ ಸಮ್ಮತಿಸಿರಲಿಲ್ಲ. ಇದರಿಂದ ಕೋಪಗೊಂಡ ದೇವರಾಜ್ ತನ್ನ ಬಳಿ ಇದ್ದ ಪಿಸ್ತೂಲಿನಿಂದ ಪ್ರಕಾಶ್ ಮೇಲೆ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ. ಈ ಕುರಿತು ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. : : ’ … # # # #