ಹೆಣ್ಣು ಮಗುವಿಗೆ ಅಪ್ಪನಾದ ಲೂಸ್ ಮಾದ ಯೋಗಿ ಬೆಂಗಳೂರು, ಮೇ 25, 2019 (..): ನಟ ಲೂಸ್ ಮಾದ ಯೋಗಿ ಸಾಹಿತ್ಯ ಕುಟುಂಬಕ್ಕೆ ಹೊಸ ಅತಿಥಿ ಆಗಮನವಾಗಿದೆ. ಮೇ 25ರ ಶನಿವಾರ ಬೆಳಗ್ಗೆ 5 ಗಂಟೆಗೆ ಪದ್ಮನಾಭನಗರದಲ್ಲಿರುವ ಮದರ್‌ವುಡ್ ಆಸ್ಪತ್ರೆಯಲ್ಲಿ ಸಾಹಿತ್ಯ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. 2017 ನವೆಂಬರ್ 2ರಂದು ಸಾಹಿತ್ಯ-ಯೋಗಿ ದಾಂಪತ್ಯ ಜೀನಕ್ಕೆ ಕಾಲಿಟ್ಟಿದ್ದರು. ಈ ಕ್ಯೂಟ್ ಕಪಲ್ ಈಗ ಹೆಣ್ಣು ಮಗುವಿನ ತಂದೆ-ತಾಯಿಯಾಗಿದ್ದಾರೆ.