ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ: ಸಚಿವ ಸ್ಥಾನದ ಬಗ್ಗೆ ವಿ.ಶ್ರೀನಿವಾಸ್ ಪ್ರಸಾದ್ ಪ್ರತಿಕ್ರಿಯಿಸಿದ್ದು ಹೀಗೆ… ಮೈಸೂರು,ಮೇ,24,2019(..): ಲೋಕಸಭಾ ಚುನಾವಣೆ ಮೂಲಕ ಮೈಸೂರು ಭಾಗದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯಗೆ ಜನತೆ ಒಳ್ಳೆ ಉತ್ತರ ನೀಡಿದ್ದಾರೆ ಎಂದು ಚಾಮರಾಜನಗರ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಟಾಂಗ್ ನೀಡಿದ್ದಾರೆ. ಮೈಸೂರಿನಲ್ಲಿ ಮಾಧ್ಯಮದಗಳ ಜತೆ ಮಾತನಾಡಿದ ವಿ.ಶ್ರೀನಿವಾಸ್ ಪ್ರಸಾದ್, ಕಾಂಗ್ರೆಸ್ ಭದ್ರಕೋಟೆ ಭೇದಿಸೋದು ಅಷ್ಟು ಸುಲಭವಲ್ಲ. ಕಳೆದ ಚುನಾವಣೆಗಳಲ್ಲಿ ಕೆಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತಗಳಿಕೆಯನ್ನ ಕಡಿಮೆ ಮಾಡುವುದು ದೊಡ್ಡ ಚಾಲೇಂಜ್ ಆಗಿತ್ತು. ವರುಣ, ಟೀ.ನರಸೀಪುರ, ಹೆಚ್.ಡಿ ಕೋಟೆ ಸೇರಿದಂತೆ ಹಲವು ಭಾಗಗಳಲ್ಲಿ ಕಾಂಗ್ರೆಸ್ ಬೆರೂರಿತ್ತು. ಅಂತಹ ಕ್ಷೇತ್ರಗಳಲ್ಲಿ ಈಗ ಬಿಜೆಪಿ ಅಸ್ಥಿತ್ವ ಕಂಡುಕೊಂಡಿದೆ ಎಂದು ತಿಳಿಸಿದರು. ಹಾಗೆಯೇ ಸಚಿವ ಸ್ಥಾನದ ಬಗ್ಗೆ ಪ್ರತಿಕ್ರಿಯಿಸಿದ ಶ್ರೀನಿವಾಸ್ ಪ್ರಸಾದ್, ಕ್ಷೇತ್ರದ ಜನತೆಗೆ ಈ ಮೂಲಕ ಅಭಿನಂದನೆ ಸಲ್ಲಿಸುತೇನೆ. ನಾನು ಸದ್ಯ ಸಚಿವ ಸ್ಥಾನ ಪಡೆಯುವ ಬಗ್ಗೆ ಯೋಚಿಸಿಲ್ಲ. ಅದು ಕೇಂದ್ರ ನಾಯಕರಿಗೆ ಬಿಟ್ಟ ವಿಚಾರ. ಈ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಐದು ವರ್ಷ ಕ್ಷೇತ್ರದ ಜನರ ಸೇವೇಮಾಡೋದೇ ನನ್ನ ಕೆಲಸ ಎಂದು ನುಡಿದರು. ಕಾಂಗ್ರೆಸ್ ನ ವರ್ಚಸ್ಸು ರಾಜ್ಯದಲ್ಲಿ ಕಡಿಮೆಯಾಗಿದೆ. ಮೈಸೂರು ಭಾಗದಲ್ಲಿ ಜನರು ಸಿದ್ದರಾಮಯ್ಯ ಅವರಿಗೆ ತಕ್ಕ ಉತ್ತರ ನೀಡಿದ್ದಾರೆ ಎಂದು ಶ್ರೀನಿವಾಸ್ ಪ್ರಸಾದ್ ಟಾಂಗ್ ನೀಡಿದರು. : # # #