‘ಸನ್ನಿ ಲಿಯೋನ್ ಎಲೆಕ್ಷನ್’ಗೆ ನಿಲ್ಲಿಸಿ’, ಟ್ರೋಲ್’ಗೆ ಆಹಾರವಾದ ಅರ್ನಬ್ ಗೋಸ್ವಾಮಿ ! ನವದೆಹಲಿ, ಮೇ 23, 2019 (..):ರಿಪಬ್ಲಿಕ್ ಟಿವಿ ಸಂಸ್ಥಾಪಕ ಅರ್ನಬ್ ಗೋಸ್ವಾಮಿ ನೆಟ್ಟಿಗರಿಂದ ಟ್ರೀಲ್’ಗೆ ಆಹಾರವಾಗಿದ್ದಾರೆ! ಲೋಕಸಭಾ ಚುನಾವಣೆಯ ಫಲಿತಾಂಶದ ಕುರಿತು ಮಾತನಾಡುವ ವೇಳೆ ಸನ್ನಿ ಲಿಯೋನ್ ಹೆಸರನ್ನು ಬಾಯಿತಪ್ಪಿ ಹೇಳಿ ನಗೆಪಾಟಲಿಗೀಡಾಗಿದ್ದಾರೆ. 2019 ರ ಚುನಾವಣೆ ಫಲಿತಾಂಶದ ಕುರಿತು ಚರ್ಚಿಸುವ ಸಂದರ್ಭದಲ್ಲಿ ಪಂಜಾಬ್ ಗುರುದಾಸ್ಪುರ್ ಬಿಜೆಪಿ ಅಭ್ಯರ್ಥಿ ಸನ್ನಿ ಡಿಯೋಲ್ ಬಗ್ಗೆ ಹೇಳುವಾಗ ಸನ್ನಿ ಲಿಯೋನ್ ಎಂದು ಹೇಳಿದ್ದು ಎಲ್ಲೆಡೆ ಟ್ರೋಲ್ ಆಗುತ್ತಿದೆ. ಇದಕ್ಕೆ ಸನ್ನಿ ಲಿಯೋನ್ ಕೂಡ ಟ್ವೀಟ್ ಮಾಡಿದ್ದು ತಾನು ಎಷ್ಟು ಓಟ್ ಗಳಿಂದ ಮುಂದಿದ್ದೇನೆ ಎಂದು ಪ್ರಶ್ನೆ ಮಾಡಿ ಅಣಕಿಸಿದ್ದಾರೆ. ಸದ್ಯ ಈ ವಿಡಿಯೋ ಎಲ್ಲೆಡೆ ಹರಿದಾಡುತ್ತಿದ್ದು, ಸಾಕಷ್ಟು ಟ್ವೀಟ್ಗಳನ್ನು ಪಡೆಯುತ್ತಿದೆ.