ನಾಳೆ ಸಂಜೆವರೆಗೆ ಮಾತ್ರ ಹೆಚ್.ಡಿ ಕುಮಾರಸ್ವಾಮಿ ಸಿಎಂ- ಭವಿಷ್ಯ ನುಡಿದ ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಬೆಂಗಳೂರು,ಮೇ.22,2019(..): ಎಚ್.ಡಿ.ಕುಮಾರಸ್ವಾಮಿ ನಾಳೆ ಸಂಜೆಯವರೆಗೆ ಮಾತ್ರ ಮುಖ್ಯಮಂತ್ರಿಯಾಗಿರುತ್ತಾರೆ. ನಾಡಿದ್ದು ಅವರು ರಾಜೀನಾಮೆ ನೀಡುತ್ತಾರೆ ಎಂದು ಕೇಂದ್ರ ಸಚಿವ ಡಿವಿಸದಾನಂದಗೌಡ ಭವಿಷ್ಯ ನುಡಿದರು. ಮಾಧ್ಯಮದವರ ಜತೆ ಇಂದು ಮಾತನಾಡಿದ ಡಿವಿಸದಾನಂದಗೌಡರು, ಹೊಸ ಸರ್ಕಾರ ರಚನೆಗೆ ವೇದಿಕೆ ಸಿದ್ಧವಾಗಿದೆ. ಕುಮಾರಸ್ವಾಮಿ ಅಧಿಕಾರ ಕಳೆದುಕೊಳ್ಳುತ್ತಾರೆ. ನಾಳೆ ಸಂಜೆವರೆಗೆ ಮಾತ್ರ ಅವರು ಸಿಎಂ ಎಂದರು. ಸಿದ್ದರಾಮಯ್ಯ ಬಗ್ಗೆ ರೋಷನ್ ಬೇಗ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಡಿ.ವಿ ಸದಾನಂದಗೌಡ, ಸಿದ್ದರಾಮಯ್ಯ ಒಬ್ಬ ದುರಂಹಕಾರಿ. ರೋಷನ್ ಬೇಗ್ ಹೇಳಿದ್ದು ನಿಜ. ಸತ್ಯವನ್ನು ಬಹಳ ದಿನ ಮುಚ್ಚಿಡಲು ಸಾಧ್ಯವಿಲ್ಲ ಎಂದು ರೋಷನ್ ಬೇಗ್ ಪರ ಬ್ಯಾಟಿಂಗ್ ಮಾಡಿದ್ದಾರೆ. ಚಂದ್ರಬಾಬುಬಾಯ್ಡು ಹೆಚ್.ಡಿ ದೇವೇಗೌಡರ ಭೇಟಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು ಚಂದ್ರಬಾಬುಬಾಯ್ಡು ಅವರಿಗೆ ಕೆಲಸ ಇಲ್ಲ. ಅವರು ತಮ್ಮ ಇಮೇಜ್ ಕಳೆದುಕೊಂಡಿದ್ದಾರೆ. ನಾಯ್ಡು ಅವರ ಮನಸ್ಥಿತಿಯೇ ಹೆಚ್.ಡಿ ಕುಮಾರಸ್ವಾಮಿಯಲ್ಲೂ ಇದೆ ಎಂದು ಡಿವಿ ಸದಾನಂದಗೌಡರು ತಿಳಿಸಿದರು. : .. . ’ # # # #