ಮಾಜಿ ಸಿಎಂಗೆ ಮಗಳ ಮದುವೆ ಆಮಂತ್ರಣ ನೀಡಿದ ರವಿಚಂದ್ರನ್ ಬೆಂಗಳೂರು, ಮೇ 22, 2019 (..):ನಟ ರವಿಚಂದ್ರನ್ ಪುತ್ರಿ ಗೀತಾಂಜಲಿ ಮದುವೆ ಅದ್ದೂರಿಯಾಗಿ ನಡೆಯುತ್ತಿದೆ. ಈಗಾಗಲೇ ಮದುವೆ ಆಮಂತ್ರಣ ಪತ್ರಿಕೆ ಗಣ್ಯರಿಗೆ ಸಿನಿ ತಾರೆಯರಿಗೆ ನೀಡಲಾಗಿದ್ದು, ಬಹುತೇಕ ಮುಗಿಯುವ ಹಂತಕ್ಕೆ ಬಂದಿದೆ. ಸದ್ಯ ಇದೀಗ ರಾಜಕೀಯ ಗಣ್ಯರ ಸರದಿ ಪ್ರಾರಂಭವಾಗಿದ್ದು, ಮಾಜಿ ಸಿಎಂ ಹಾಗೂ ಹಾಲಿ ಶಾಸಕ ಸಿದ್ದರಾಮಯ್ಯ ಅವರಿಗೆ ನೀಡಲಾಗಿದೆ. ನಿನ್ನೆ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ನಟ ರವಿಚಂದ್ರನ್ ಮಗಳ ಮದುವೆಯ ಆಮಂತ್ರಣ ಪತ್ರಿಕೆ ನೀಡಿದರು.