ತೆರೆ ಮೇಲೆ ಅಬ್ಬರಿಸಲು ‘ಸಲಗ’ ವಿಜಿ ರೆಡಿ ! ಬೆಂಗಳೂರು, ಮೇ 22, 2019 (..): ದುನಿಯಾ ವಿಜಿ ಮತ್ತೆ ತೆರೆ ಮೇಲೆ ಅಬ್ಬರಿಸೋಕೆ ಬರುತ್ತಿದ್ದಾರೆ. ಈಗಾಗಲೇ ಸಲಗ ಎನ್ನುವ ಶೀರ್ಷೀಕೆಯಡಿ ಅಭಿಮಾನಿಗಳಿಗೆ ದರ್ಶನ ನೀಡುವುದಕ್ಕೆ ಬರುತ್ತಿದ್ದಾರೆ. ಇದೀಗ ಈ ಸಲಗ ಸಿನಿಮಾ ಸ್ಕ್ರಿಪ್ಟ್ ಪೂಜೆ ನೆರವೇರಿದೆ. ಸದ್ಯ ಅಭಿಮಾನಿಗಳು ಕೂಡ ಸಲಗ ಸಿನಿಮಾ ಮೇಲೆ ಬಹಳಷ್ಟು ನಿರೀಕ್ಷೆಯಿಟ್ಟಿದ್ದಾರೆ. ಸವದತ್ತಿ ಎಲ್ಲಮ್ಮನ ದೇವಸ್ಥಾನದಲ್ಲಿ ಸ್ಕ್ರಿಪ್ಟ್ ಪೂಜೆಯೂ ನಡೆಯಿತು. ಈ ಮೂಲಕ ಮೊದಲ ಬಾರಿಗೆ ನಿರ್ದೇಶನದತ್ತ ಸಾಗಿದ್ದಾರೆ ನಟ ದುನಿಯಾ ವಿಜಿ.