ಮತ್ತೊಂದು ಪ್ರಸಾದ ದುರಂತ: ದೇವಾಸ್ಥಾನದಲ್ಲಿ ಪ್ರಸಾದ ಸೇವಿಸಿ ಓರ್ವ ಬಾಲಕ ಸಾವು: ಹಲವು ಮಂದಿ ಅಸ್ವಸ್ಥ… ತುಮಕೂರು,ಮೇ,22,2019(..) “ರಾಜ್ಯದಲ್ಲಿ ಮತ್ತೊಂದು ಪ್ರಸಾದ ದುರಂತ ಸಂಭವಿಸಿದ್ದು, ದೇವಸ್ಥಾನದಲ್ಲಿ ಪ್ರಸಾದ ಸೇವಿಸಿ ಓರ್ವ ಬಾಲಕ ಸಾವನ್ನಪ್ಪಿ 20ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿರುವ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಪಾವಗಡ ತಾಲೂಕಿನ ನಿಡಗಲ್ಲು ವೀರಭದ್ರ ದೇವಾಲಯದಲ್ಲಿ ಈ ಘಟನೆ ನಡೆದಿದೆ. ವೀರಭದ್ರಪ್ಪ (11) ಪ್ರಸಾದ ಸೇವಿಸಿ ಮೃತಪಟ್ಟ ಬಾಲಕ. ವೀರಭದ್ರ ಸ್ವಾಮಿ ದೇವಾಲಯಕ್ಕೆ ಭಕ್ತರು ತೆರಳಿದ್ದರು. ಈ ವೇಳೆ, ಭಕ್ತರು ಅಡುಗೆಗೆ ನೀರಿಲ್ಲದ ಕಾರಣ ತೊಟ್ಟಿಯ ನೀರು ಬಳಸಿ ಅಡುಗೆ ಮಾಡಿದ್ದರು. ಪ್ರಸಾದ ಸೇವಿಸಿದ ಬಳಿಕ ಹಲವರಿಗೆ ವಾಂತಿ ಭೇದಿ ಆರಂಭವಾಗಿದ್ದು, 20 ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದಾರೆ. ಅಸ್ವಸ್ಥರನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ತೊಟ್ಟಿ ನೀರಿನಿಂದ ತೊಂದರೆಯಾಗಿರುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. : . # # # # # #