ಸ್ವಾದಿಷ್ಟ ಮಶ್ರೂಮ್ ಪಲಾವ್ ರುಚಿ ನೋಡಿ ಮಶ್ರೂಮ್ ಪಲಾವ್ ಮಾಡುವ ವಿಧಾನ * 1 ಕಪ್ ಅಕ್ಕಿ* 1 ಕಪ್ ಅಣಬೆ* 4 ಈರುಳ್ಳಿ (ಸಾಂಬಾರು ಈರುಳ್ಳಿ)* 2 ಲವಂಗ* 1/2 ಇಂಚಿನ ಚೆಕ್ಕೆ* 2 ಏಲಕ್ಕಿ* 1 ಪಲಾವ್ ಎಲೆ* 1 ಚಮಚ ಗರಂ ಮಸಾಲ* 1 ಚಮಚ ಜೀರಿಗೆ ಪುಡಿ* ಸ್ವಲ್ಪ ಎಣ್ಣೆ* ರುಚಿಗೆ ತಕ್ಕಷ್ಟು ಉಪ್ಪು ತಯಾರಿಸುವ ವಿಧಾನ:* ಅಕ್ಕಿಯನ್ನು ಶುದ್ಧಗೊಳಿಸಿ ತೊಳೆಯಬೇಕು. ಬಿಸಿ ನೀರಿನಲ್ಲಿ 10 ನಿಮಿಷ ನೆನೆಸಬೇಕು. * ಸಾಂಬಾರು ಈರುಳ್ಳಿ ಸಣ್ಣಗೆ ಕತ್ತರಿಸಿ ಹಾಗೂ ಅದನ್ನು ಒಂದೆಡೆ ಇಟ್ಟುಕೊಳ್ಳಬೇಕು.* ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿಕೊಳ್ಳಿ, ಎಣ್ಣೆ ಸರಿ ಬಿಸಿ ಆದ ನಂತರ ಅದರಲ್ಲಿ ಈರುಳ್ಳಿ, ಲವಂಗ, ಚೆಕ್ಕೆ, ಏಲಕ್ಕಿ ಮತ್ತು ಪಲಾವ್ ಎಲೆ, ಹಾಗೂ ಸಣ್ಣದಾಗಿ ತುಂಡು ಮಾಡಿರುವ ಮಶ್ರೂಮ್ ಅನ್ನು ಹಾಕಿ.* ತದನಂತರ ಜೀರಿಗೆ ಪುಡಿ ಮತ್ತು ಗರಂ ಮಸಾಲಾ ಪುಡಿಯನ್ನು ಹಾಕಿ ಚೆನ್ನಾಗಿ ಬೆರೆಸಿಕೊಳ್ಳಿ.* ನಂತರ ಅಕ್ಕಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.* ಎರಡು ಕಪ್ ಬಿಸಿ ನೀರನ್ನು ಅಕ್ಕಿ ಮಿಶ್ರಣಕ್ಕೆ ಹಾಕಿ ಈರುಳ್ಳಿಯ ಹಸಿರು ಭಾಗ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಚೆನ್ನಾಗಿ ತಿರುಗಿಸಬೇಕು. ಮುಚ್ಚುಳ ಮುಚ್ಚಿ ಬೇಯಿಸಿದರೆ ಮಶ್ರೂಮ್ ಪಲಾವ್ ತಿನ್ನಲು ರೆಡಿಯಾಗಿರುತ್ತೆ.