ಮೇ. 23 ರಂದು ಮತ ಎಣಿಕೆ : 3 ಗಂಟೆ ತಡವಾಗಿ ಪ್ರಕಟವಾಗಲಿದೆ ಅಧಿಕೃತ ಫಲಿತಾಂಶ..! ಬೆಂಗಳೂರು, ಮೇ.21, 2019 : (.. ) : ಲೋಕಸಭಾ ಚುನಾವಣೆಗೆ ಕ್ಷಣ ಗಣನೆ ಆರಂಭವಾಗಿದೆ. ಎಲೆಕ್ಟ್ರಾನಿಕ್ ಮಾಧ್ಯಮಗಳಂತು ನಮ್ಮಲ್ಲೇ ಮೊದಲ ಫಲಿತಾಂಶ ಎಂದು ಸ್ಪರ್ಧೆಗೆ ಬಿದ್ದವರಂತೆ ಪ್ರೊಮೋ ಓಡಿಸುತ್ತಿದ್ದಾರೆ. ಆದರೆ ವಾಸ್ತವವೇ ಬೇರೆ. ಚುನಾವಣಾ ಆಯೋಗದ ಪ್ರಕಾರವೇ ಮತ ಎಣಿಕೆಯ ಮೊದಲ ಫಲಿತಾಂಶ ಅಧಿಕೃತವಾಗಿ ಲಭಿಸುವುದು ಮಧ್ಯಾಹ್ನ 3 ಗಂಟೆಗೆ…! ಹೌದು ಕರ್ನಾಟಕ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರು ನೀಡಿರುವ ಮಾಹಿತಿಯ ಪ್ರಕಾರ, ಈ ಮೊದಲು ಗುರುವಾರ ಮಧ್ಯಾಹ್ನ 12 ಗಂಟೆಗೆ ಮೊದಲ ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ ಈಗ ಈ ಸಮಯ ಸುಮಾರು 3 ತಾಸುಗಳಷ್ಟು ವಿಳಂಬವಾಗಲಿದೆ. ಅಂದ್ರೆ ಮಧ್ಯಾಹ್ನ 12 ಗಂಟೆಗೆ ಪ್ರಕಟವಾಗಬೇಕಾಗಿದ್ದ ಫಲಿತಾಂಶ ಮಧ್ಯಾಹ್ನ 3 ಗಂಟೆ ವೇಳೆಗೆ ಅಧಿಕೃತವಾಗಿ ಪ್ರಕಟವಾಗಲಿದೆ. ತಡವೇಕೆ : ಈ ಬಾರಿ ಪ್ರತಿ ಬೂತ್ ಗೂ ವಿವಿ ಪ್ಯಾಟ್ ಅಳವಡಿಸಲಾಗಿದ್ದು, ಇದರ ಮತ ಸಂಖ್ಯೆಯ ಎಣಿಕೆಯನ್ನು ಗಣನೆಗೆ ತೆಗೆದುಕೊಳ್ಳಬೇಕಾಗಿದೆ. ಹಾಗಾಗಿ ನಿಗಧಿತ ಸಮಯಕ್ಕಿಂತ ಹೆಚ್ಚು ಸಮಯ ಚನಾವಣಾ ಫಲಿತಾಂಶದ ಪ್ರಕಟಣೆಗೆ ಹಿಡಿಯಲಿದೆ ಎಂದು ಕಾರಣ ನೀಡಲಾಗಿದೆ. ಜತೆಗೆ ಸಂಜೆ 7 ರ ಒಳಗೆ ಮತ ಎಣಿಕೆಯ ಸಂಪೂರ್ಣ ಫಲಿತಾಂಶ ಪ್ರಕಟಿಸುವ ಭರವಸೆಯನ್ನು ಚುನಾವಣಾ ಆಯೋಗ ನೀಡಿದೆ. : 3 : 3 , 12 3 , 28 7 .