ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರುತ್ತೆ: ಇನ್ನೆರೆಡು ದಿನ ಕಾದು ನೋಡಿ- ಬಿಜೆಪಿ ಮುಖಂಡ ಗೋವಿಂದ ಕಾರಜೋಳ… ಬೆಂಗಳೂರು,ಮೇ,21,2019(..): ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರಬೇಕೆಂಬುದು ಜನರ ಆಶಯ. ಇನ್ನೆರೆಡು ದಿನ ಕಾದು ನೋಡಿ ಎಂದು ಬಿಜೆಪಿ ನಾಯಕ ಗೋವಿಂದಕಾರಜೋಳ ಹೇಳಿದ್ದಾರೆ. ಮಾಧ್ಯಮದ ಜತೆ ಇಂದು ಮಾತನಾಡಿದ ಗೋವಿಂದ ಕಾರಜೋಳ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರಲಿ ಎಂಬುದು ಜನರ ಆಸೆ. 20018ರಲ್ಲಿ ಸ್ವಲ್ಪದರಲ್ಲೇ ಮಿಸ್ ಆಯ್ತು. ಈಗ ಅಧಿಕಾರಕ್ಕೆ ಬರುತ್ತೇವೆ. ರಮೇಶ್ ಜಾರಕಿಹೊಳಿ ಸೇರಿ 20 ಮಂದಿ ಬಿಜೆಪಿಗೆ ಬರ್ತಾರೆ. ಇನ್ನೆರೆಡು ಕಾದು ನೋಡಿ ಎಂದರು. ಲೋಕಸಭಾ ಚುನಾವಣೆಯಲ್ಲಿ 350 ಸ್ಥಾನಗಳು ಬರುತ್ತವೆ ಅಂತಾ ಭರವಸೆ ಇತ್ತು. ರಾಜ್ಯದಲ್ಲಿ 22 ಸೀಟ್ ಗೆಲ್ತೀವಿ ಅಂತಾ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ. ಎಕ್ಸಿಟ್ ಪೋಲ್ ಕೂಡ ನಮ್ಮ ಪರವಾಗಿ ಇವೆ. ಇವುಗಳ ರಾಜ್ಯ ರಾಜಕೀಯದ ಮೇಲೆ ಪರಿಣಾಮ ಬೀಳುತ್ತದೆ ಎಂದು ಗೋವಿಂದ ಕಾರಜೋಳ ತಿಳಿಸಿದ್ದಾರೆ. : . – # # # #