ಮತ್ತೆ ಕಾಲೇಜಿಗೆ ಹೋಗಲಿದ್ದಾರೆ ಪವರ್ ಸ್ಟಾರ್ ಅಪ್ಪು ! ಬೆಂಗಳೂರು, ಮೇ 21, 2019 (..): ಯುವರತ್ನ ಪುನೀತ್​ ರಾಜ್​ಕುಮಾರ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ. ಈ ಚಿತ್ರದಲ್ಲಿ ಯಂಗ್ ಲುಕ್ ನಲ್ಲಿ ಪುನೀತ್ ರಾಜ್ ಕುಮಾರ್ ಕಾಣಿಸಿಕೊಳ್ಳಲಿದ್ದಾರೆ. ಸಂತೋಷ್​ ರಾಮ್​ ನಿದೇರ್ಶನದಲ್ಲಿ ಮೂಡಿಬರಲಿರುವ ಈ ಚಿತ್ರದಲ್ಲಿ ಪುನೀತ್​ ಕಾಲೇಜು ವಿದ್ಯಾರ್ಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಿರ್ದೇಶಕ ಸಂತೋಷ್​ ಆನಂದ್​ ರಾಮ್​ ಟ್ವೀಟ್​ ಮಾಡಿರುವ ಪುನೀತ್​ ಅವರ ಯಂಗ್​ ಲುಕ್​ನ ಈ ಚಿತ್ರ ಈಗ ವೈರಲ್​ ಆಗುತ್ತಿದೆ. ಇನ್ನೂ ಈ ಸಿನಿಮಾದ ಚಿತ್ರೀಕರಣ ಆರಂಭವಾಗಿಲ್ಲ.