ವಿವಾಹ ಸಮಾರಂಭ: ದೊಡ್ಡ ಗಾಜನೂರಿನ ಮನೆಗೆ ಆಗಮಿಸಿದ ಡಾ. ರಾಜ್ ಫ್ಯಾಮಿಲಿ.. ಚಾಮರಾಜನಗರ,ಮೇ,20,2019(..): ನಟ ರಾಘವೇಂದ್ರರಾಜ್ ಕುಮಾರ್ ಅವರ ದ್ವೀತೀಯ ಪುತ್ರನ ಮದುವೆ ಸಮಾರಂಭಕ್ಕೆ ಹಿನ್ನೆಲೆ ಡಾ. ರಾಜ್ ಕುಮಾರ್ ಅವರ ಕುಟುಂಬ ದೊಡ್ಡಗಾಜನೂರಿನ ಮನೆಗೆ ಆಗಮಿಸಿದೆ. ರಾಘವೇಂದ್ರ ರಾಜ್ ಕುಮಾರ್ ಅವರ ಎರಡನೇ ಪುತ್ರ ಯುವ ರಾಜ್ ಕುಮಾರ್ ಮದುವೆಯ ಶಾಸ್ತ್ರ ಮಾಡಲು ಗಡಿಜಿಲ್ಲೆ ಚಾಮರಾಜನಗರದಲ್ಲಿರುವ ದೊಡ್ಡ ಗಾಜನೂರಿನ ಮನೆಗೆ ಡಾ. ರಾಜ್ ಅವರ ಕುಟುಂಬಸ್ಥರು ಆಗಮಿಸಿದ್ದಾರೆ. ಯುವರಾಜ್ ಕುಮಾರ್ ಗೆ ಅರಿಸಿನ ಶಾಸ್ತ್ರವನ್ನ ಕುಟುಂಬಸ್ಥರು ನೆರವೇರಿಸಿದ್ದು, ಈ ಕಾರ್ಯಕ್ರಮದಲ್ಲಿ ರಾಘವೇಂದ್ರ ರಾಜ್ ಕುಮಾರ್, ಮತ್ತು ಕುಟುಂಬಸ್ಥರು ಭಾಗಿಯಾಗಿದ್ದರು. ಯುವ ರಾಜ್ ಕುಮಾರ್ ಗೆ ನಾಗರತ್ನ ಮತ್ತು ಬೈರಪ್ಪ ರವರ ದ್ವಿತೀಯ ಪುತ್ರಿ ಶ್ರೀದೇವಿ ಬೈರಪ್ಪ ಜೊತೆ ಮದುವೆ ನಿಶ್ಚಯ ಮಾಡಲಾಗಿದ್ದು, ಇದೇ ತಿಂಗಳ, 25ರ ಶನಿವಾರ ಸಂಜೆ 6.30ಕ್ಕೆ ದೇವತಾ ಕಾರ್ಯ ನಡೆಯಲಿದೆ. ಮೇ 26ರ ಭಾನುವಾರ ಬೆಳಿಗ್ಗೆ 10 ರಿಂದ 11 ಗಂಟೆಗೆ ಮುಹೂರ್ತ ನಿಗದಿಯಾಗಿದ್ದು 26ನೇ ಭಾನುವಾರ ಸಂಜೆ 6.30 ರಿಂದ ಆರತಕ್ಷತೆ ನಡೆಯಲಿದೆ. ಬೆಂಗಳೂರಿನ ಪ್ಯಾಲೇಸ್ ರೋಡ್ ನಲ್ಲಿರುವ, ಅರಮನೆಯ ಮುಖ್ಯಭವನದಲ್ಲಿ ಮದುವೆ ಕಾರ್ಯ ನಡೆಯಲಿದೆ. : : . # # #