ಮೈಸೂರಿನಲ್ಲಿ ಶೂಟೌಟ್ ಕೇಸ್: ವಿಜಯನಗರ ಠಾಣೆಯ ಎಲ್ಲಾ ಸಿಬ್ಬಂದಿಗಳನ್ನ ವರ್ಗಾವಣೆ ಮಾಡಿ ಆದೇಶ…. ಮೈಸೂರು,ಮೇ,20,2019(..): ಮೈಸೂರಿನಲ್ಲಿ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಶೂಟೌಟ್ ತೆರಳಿದ್ದ ವಿಜಯನಗರ ಠಾಣೆಯ ಎಲ್ಲ ಸಿಬ್ಬಂದಿಗಳನ್ನ ವರ್ಗಾವಣೆ ಮಾಡಲಾಗಿದೆ. ಮೈಸೂರು ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ಅವರು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ. ಮೊನ್ನೆಯಷ್ಟೆ ಶೂಟೌಟ್ ಮಾಡಿದ್ದ ಇನ್ಸ್ ಪೆಕ್ಟರ್ ಬಿ.ಜಿ.ಕುಮಾರ್ ಅವರನ್ನ ಬೆಂಗಳೂರಿಗೆ ವರ್ಗಾವಣೆ ಆಗಿತ್ತು. ಅಕ್ರಮ ದಂಧೆಯ ದಾಳಿಗೆ ತೆರಳಿದ್ದ ಇಡೀ ತಂಡದ ಸಿಬ್ಬಂದಿಗಳನ್ನ ಮೈಸೂರಿನ‌ ವಿವಿಧ ಠಾಣೆಗಳಿಗೆ ವರ್ಗಾವಣೆ ಮಾಡಲಾಗಿದೆ. ಎಎಸ್‌ಐ ವೆಂಕಟೇಶ್‌ಗೌಡ, ಪೇದೆಗಳಾದ ಮಹೇಶ್, ವೀರಭದ್ರ, ವರ್ಗಾವಣೆಗೊಂಡ ಪೊಲೀಸ್ ಸಿಬ್ಬಂದಿಗಳು. ಗರುಡ-13 ವಾಹನದ ಪೇದೆ ಈರಣ್ಣ ಹಾಗೂ ಗರುಡ ಡ್ರೈವರ್ ಪುನಿತ್ ಕೂಡ ಟ್ರಾನ್ಸ್ ಫರ್ ಮಾಡಲಾಗಿದೆ ಸಿಐಡಿ ತನಿಖೆ ಚುರುಕುಗೊಂಡ ಹಿನ್ನೆಲೆಯಲ್ಲಿ ವರ್ಗಾವಣೆ ಕುತೂಹಲ ಮೂಡಿಸಿದ್ದು, ಶೂಟೌಟ್ ಪ್ರಕರಣಕ್ಕೆ ದಿನಕ್ಕೊಂದು ತಿರುವು ಸಿಗುತ್ತಿದೆ. : . # # # #