ಜಯಲಲಿತಾ ಪಾತ್ರಕ್ಕಾಗಿ ಕಂಗನಾಗೆ 25 ಕೋಟಿ ರೂ. ಸಂಭಾವನೆ ಮುಂಬೈ, ಮೇ 20, 2019 (..): ಜಯಲಲಿತ ಪಾತ್ರ ನಿಭಾಯಿಸುತ್ತಿರುವ ನಟಿ ಕಂಗಾನ ಸಂಭಾವನೆ ವಿಷಯ ಎಲ್ಲೆಡೆ ಚರ್ಚೆಯಾಗುತ್ತಿದೆ. ಜಯಲಲಿತ ಅವರ ಬಯೋಪಿಕ್’ನಲ್ಲಿ ಕಾಣಿಸಿಕೊಳ್ಳುತ್ತಿರುವ ಕಂಗನಾ 25 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎಂಬ ವಿಷಯ ಬಿಸಿ ಬಿಸಿ ಚರ್ಚೆಯಾಗುತ್ತಿದೆ. ಕಂಗಾನ ತಮಿಳರ ಪಾಲಿನ ಅಮ್ಮನಾಗಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಸಿನಿಮಾ ಚಿತ್ರೀಕರಣ ಪ್ರಾರಂಭವಾಗಲಿದೆ. ಇದೀಗ ಕಂಗಾನ ಈ ಸಿನಿಮಾಗೆ ತೆಗೆದುಕೊಂಡ ಸಂಭಾವನೆ ಬಗ್ಗೆ ಚರ್ಚೆಗಳಾಗುತ್ತಿದೆ.