‘ಕುರುಕ್ಷೇತ್ರ’ / ಪೈಲ್ವಾನ್ ! ಅಭಿಮಾನಿಗಳಿಗೆ ಹಬ್ಬ ! ಬೆಂಗಳೂರು, ಮೇ 20, 2019 (..): ಪೈಲ್ವಾನ್​ ಹಾಗೂ ಕುರುಕ್ಷೇತ್ರ ಸಿನಿಮಾ ರಿಲೀಸ್​ ಡೇಟ್ ಅನೌನ್ಸ್ ಆಗಿದೆ. ರಮಹಾಲಕ್ಷ್ಮೀ ಹಬ್ಬದ ಸಂಭ್ರಮದಲ್ಲಿ ಚಿತ್ರಮಂದಿರಗಳಲ್ಲಿ ದುರ್ಯೋಧನ ವರ್ಸಸ್ ಪೈಲ್ವಾನ್​ ಫೈಟ್ ನಡೆಯಲಿದೆ. ಆಗಸ್ಟ್ 9ರಂದು ಚಿತ್ರ ಬಿಡುಗಡೆಯಾಗಲಿದ್ದು, ಅಭಿಮಾನಿಗಳು ಇದಕ್ಕಾಗಿ ಕಾದಿದ್ದಾರೆ. ವಿಶೇಷ ಎಂದರೆ ಈ ಇಬ್ಬರು ಸ್ಟಾರ್ ನಟರ ಮೈ ಆಟೋಗ್ರಾಫ್ ಹಾಗೂ ಸುಂಟರಗಾಳಿ ಚಿತ್ರಗಳು ಕೂಡ ಒಂದೇ ದಿನ ಬಿಡುಗಡೆಯಾಗಿದ್ದವು.