ರಾಜ್ಯದ ಸಿಎಂ ಹೆಚ್.ಡಿಕೆ: ಆದ್ರೆ ಆ ಸ್ಥಾನದಲ್ಲಿ ಸಿದ್ದರಾಮಯ್ಯರನ್ನ ನೋಡ್ತೇನೆ ಎಂದ್ರು ಸಚಿವ ಪುಟ್ಟರಂಗಶೆಟ್ಟಿ… ಮೈಸೂರು,ಮೇ,19,2019(..): ರಾಜ್ಯದ ಸಿಎಂ ಕುಮಾರಸ್ವಾಮಿ, ಆದ್ರೆ ಆ ಸ್ಥಾನದಲ್ಲಿ ನಾನು ಸಿದ್ದರಾಮಯ್ಯರನ್ನ‌ ನೋಡುತ್ತೇನೆ ಎಂದು ಸಚಿವ ಪುಟ್ಟರಂಗಶೆಟ್ಟಿ ಹೇಳಿಕೆ ನೀಡಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಸಚಿವ ಪುಟ್ಟರಂಗಶೆಟ್ಟಿ, ಬಸವರಾಜ ಹೊರಟ್ಟಿ ಹೇಳಿದಂತೆ ಇಲ್ಲಿ ನಡೆಯೋಲ್ಲ. ಇಲ್ಲಿ ದೇವೇಗೌಡ,ಸಿದ್ದರಾಮಯ್ಯ, ಕುಮಾರಸ್ವಾಮಿ ಆ ಮಾತು ಹೇಳಿದ್ರೆ ಮಾತ್ರ ಅದು ನಡೆಯೋದು. ಹೊರಟ್ಟಿ ಎಲೆಕ್ಷನ್ ಎದುರಿಸಿದ್ರೆ ಗೊತ್ತಾಗೋದು. ಅವರ ಮಾತು ನಡೆಯೋಲ್ಲ ಬಿಡಿ ಎಂದರು. ಈ ಮೊದಲು ಸಹ ಸಿದ್ದರಾಮಯ್ಯರೇ ನಮ್ಮ ಸಿಎಂ ಎಂದಿದ್ದ ಪುಟ್ಟರಂಗಶೆಟ್ಟಿ.ಈಗಲೂ ನನ್ನ ಮಾತಿಗೆ ಬದ್ದ ಎಂದು ಹೇಳಿದ್ದಾರೆ ಸಿದ್ದರಾಮಯ್ಯ ಸಿಎಂ ಆಗಬೇಕೆಂಬ ಹೇಳಿಕೆ ಬೆನ್ನಲ್ಲೆ ಇದೀಗ ಸಚಿವ ಪುಟ್ಟರಂಗಶೆಟ್ಟಿ ಹೇಳಿಕೆ ಕುತೂಹಲ ಮೂಡಿಸಿದೆ. : . - . # # # #