ಮೈತ್ರಿ ಪಕ್ಷಗಳ ಗೊಂದಲಗಳಿಗೆ ಸರ್ಕಾರ ವಿಸರ್ಜನೆಯೇ ಪರಿಹಾರ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿದ ಬಸವರಾಜಹೊರಟ್ಟಿ…. ಬೆಂಗಳೂರು,ಮೇ,18,2019(..): ಮೈತ್ರ ಪಕ್ಷಗಳ ಗೊಂದಲಗಳಿಗೆ ಸರ್ಕಾರದ ವಿಸರ್ಜನೆಯೇ ಪರಿಹಾರ ಎಂದು ನೀಡಿದ್ದ ಹೇಳಿಕೆ ಬಗ್ಗೆ ಜೆಡಿಎಸ್ ಮುಖಂಡ ಬಸವರಾಜ ಹೊರಟ್ಟಿ ಸ್ಪಷ್ಟನೆ ನೀಡಿದ್ದಾರೆ. ಹೆಚ್.ಡಿ ಕುಮಾರಸ್ವಾಮಿ ಸಿಎಂ ಆಗಿರುವಾಗ ಸಿದ್ದು ಸಿಎಂ ಅನ್ನೋ ಅವಶ್ಯಕತೆ ಏನಿದೆ..? ಸಿದ್ದರಾಮಯ್ಯ ಸಿಎಂ ಎನ್ನವವರಿಗೆ ಬುದ್ದಿ ಕಲಿಸಲು ಹೇಳಿದ್ದೇನೆ ಎಂದು ಜೆಡಿಎಸ್ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ ಬಸವರಾಜ ಹೊರಟ್ಟಿ, ಕಾಂಗ್ರೆಸ್ –ಜೆಡಿಎಸ್ ಗೊಂದಲದಿಂದ ಸಿಎಂ ಹೆಚ್.ಡಿ ಕುಮಾರಸ್ವಾಮಿಗೆ ಕೆಲಸ ಮಾಡಲು ಆಗುತ್ತಿಲ್ಲ. ಸಿಎಂಗೆ ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗಬಾರದು. ಇದರಿಂದ ಸರ್ಕಾರದಲ್ಲಿ ಗೊಂದಲವಿದೆ ಎನ್ನುವ ಭಾವನೆ ಜನರಲ್ಲಿ ಮೂಡುತ್ತದೆ. ಹೀಗಾಗಿ ಜನರ ಹಿತದೃಷ್ಟಿಯಿಂದ ಸರ್ಕಾರ ವಿಸರ್ಜನೆ ಹೇಳಿಕೆ ನೀಡಿದ್ದೇನೆ ಎಂದು ತಿಳಿಸಿದರು. ಗೊಂದಲಗಳು ನಿವಾರಣೆಯಾಗಲಿ ಎಂದು ಈ ರೀತಿ ಹೇಳಿಕೆ ನೀಡಿದ್ದೇನೆ ಎಂದು ಬಸವರಾಜ ಹೊರಟ್ಟಿ ತಿಳಿಸಿದರು. : , # # # #