ಫಿಶ್ ಕೋಳಿ ವಡಾ ರೆಸಿಪಿ ಬೇಕಾಗುವ ಸಾಮಾಗ್ರಿಗಳು : ಕಿಂಗ್ ಫಿಶ್ ಅಥವಾ ದೊಡ್ಡ ಗಾತ್ರದ ಮೀನು(ಅರ್ಧ ಕೆಜಿ)ಖಾರದ ಪುಡಿ ಒಂದೂವರೆ ಚಮಚಕಡಲೆ ಹಿಟ್ಟು 100 ಗ್ರಾಂಅರಿಶಿಣ ಪುಡಿ ಅರ್ಧ ಚಮಚಶುಂಠಿ-ಬೆಳ್ಳುಳ್ಳಿ ಪೇಸ್ಟ್ ಅರ್ಧ ಚಮಚಗರಂ ಮಸಾಲ 1 ಚಮಚಜೀರಿಗೆ ಪುಡಿ ಅರ್ಧ ಚಮಚನಿಂಬೆ ಹಣ್ಣು 1ಸೋಂಪು 1 ಚಮಚರುಚಿಗೆ ತಕ್ಕ ಉಪ್ಪು (ಬೇಕಿದ್ದರೆ ಅರ್ಧ ಚಮಚ ತಂದೂರಿ ಮಸಾಲವನ್ನು ಸೇರಿಸಬಹುದು) ಗರಂ ಮಸಾಲೆಗೆ ಬೇಕಾಗುವ ಪದಾರ್ಥಗಳು :ಲವಂಗ 2ಏಲಕ್ಕಿ 2ನಕ್ಷತ್ರ ಮೊಗ್ಗುಚಕ್ಕೆ 1 (ಇವನ್ನು ಸ್ವಲ್ಪ ಹುರಿದು ಪುಡಿ ಮಾಡಿ ಇಡಿ) ತಯಾರಿಸುವ ವಿಧಾನ:* ಮೀನನ್ನು ಶುದ್ಧ ಮಾಡಿ, ಅದರಲ್ಲಿ ಅರಿಶಿಣ ಪುಡಿ ಮತ್ತು ಉಪ್ಪು ಹಾಕಿ ಮಿಕ್ಸ್ ಮಾಡಿ ಅರ್ಧ ಗಂಟೆ ಇಡಿ.* ನಂತರ ಕಲೆ ಹಿಟ್ಟು ಕಲೆಸಿ, ಅದಕ್ಕೆ ಗರಂ ಮಸಾಲೆ ಪುಡಿ ಮತ್ತು ಉಳಿದೆಲ್ಲಾ ಮಸಾಲೆ ಪುಡಿ ಮತ್ತು ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಹಾಕಿ ಮಿಕ್ಸ್ ಮಾಡಿ ಮತ್ತೆ ಅರ್ಧ ಅಥವಾ ಒಂದು ಗಂಟೆ ಇಡಿ.* ನಂತರ ಪ್ಯಾನ್ ಗೆ ಅರ್ಧದಷ್ಟು ಎಣ್ಣೆ ಹಾಕಿ ಅದರಲ್ಲಿ ಮೀನನ್ನು ಹಾಕಿ ಡೀಪ್ ಫ್ರೈ ಮಾಡಿ, ನಿಂಬೆ ಹಣ್ಣಿನ ಜ್ಯೂಸ್ ಹಾಕಿದರೆ ಫಿಶ್ ಕೋಳಿ ವಡಾ ರೆಡಿ.