ಬಸವರಾಜ್ ಹೊರಟ್ಟಿ ಹೇಳಿಕೆ ಬೆನ್ನಲ್ಲೇ ಮೈಸೂರಿನಲ್ಲಿ ಸಿಎಂ ಕುಮಾರಸ್ವಾಮಿ ಆಪ್ತರ ಜತೆ ಸಭೆ… ಮೈಸೂರು,ಮೇ,18,2019(..): ಮೈತ್ರಿ ಪಕ್ಷಗಳ ಗೊಂದಲಗಳಿಗೆ ಸರ್ಕಾರ ವಿಸರ್ಜನೆಯೊಂದೇ ಪರಿಹಾರ ಎಂದು ಜೆಡಿಎಸ್ ಮುಖಂಡ ಹೇಳಿಕೆ ನೀಡಿ ಮೈತ್ರಿ ಸರ್ಕಾರದಲ್ಲಿ ಸಂಚಲನ ತಂದ ಬೆನ್ನಲ್ಲೆ ಸಿಎಂ ಹೆಚ್.ಡಿ ಕುಮಾರಸ್ವಾಮಿ ತಮ್ಮ ಆಪ್ತರ ಜತೆ ಮೈಸೂರಿನಲ್ಲಿ ಸಭೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಸಭೆ ನಡೆಸುತ್ತಿದ್ದು, ಸಭೆಯಲ್ಲಿ ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ರೇಷ್ಮೆ ಸಚಿವ ಸಾ.ರಾ.ಮಹೇಶ್ ಭಾಗಿಯಾಗಿದ್ದಾರೆ. ಸಿಎಂ ಹೆಚ್.ಡಿ ಕುಮಾರಸ್ವಾಮಿ ದಿಢೀರ್ ಮೈಸೂರಿಗೆ ಆಗಮಿಸಿ ಸಭೆ ನಡೆಸುತ್ತಿದ್ದು ಬಸವರಾಜ್ ಹೊರಟ್ಟಿ ಮಾತುಗಳಿಂದ ಆಗಬಹುದಾದ ಪರಿಣಾಮಗಳ ಕುರಿತು ಚರ್ಚೆ ನಡೆಸಲಾಗುತ್ತಿದೆ. ಇನ್ನು ಆಪ್ತರ ಜತೆ ಸಲಹೆ ಪಡೆಯಲು ಸಿಎಂ ಮುಂದಾಗಿದ್ದಾರೆ. : . # # #