ಕಾನ್ಸ್ ಚಿತೋತ್ಸವದಲ್ಲಿ ಲೈಮ್ ಗ್ರೀನ್ ಡ್ರೆಸ್ ನಲ್ಲಿ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆಹಾಕಿ ಗಮನ ಸೆಳೆದ ದೀಪಿಕಾ ನವದೆಹಲಿ:ಮೇ-18;(..) ಫ್ರಾನ್ಸ್‌ನಲ್ಲಿ ನಡೆಯುತ್ತಿರುವ 72ನೇ ಕಾನ್ಸ್‌ ಚಿತ್ರೋತ್ಸವ 2019ರಲ್ಲಿ ಬಾಲಿವುಡ್ ತಾರೆಯರು ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ. ನಟಿ ದೀಪಿಕಾ ಪಡುಕೋಣೆ ಲೈಮ್ ಗ್ರೀನ್ ಬಣ್ಣದ ವಿಶೇಷವಾದ ಗೌನ್ ತೊಟ್ಟು ಎಲ್ಲರನ್ನು ಚಿತ್ತಾಕರ್ಷಕಗೊಳಿಸಿದರು. ಲೈಮ್ ಗ್ರೀನ್ ಬಣ್ಣದ ಜಿಯಾಂಬಟ್ಟಿಸ್ಟಾ ವಲ್ಲಿ ಗೌನ್​ ತೊಟ್ಟು ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಗಿದ ದೀಪಿಕಾ, ಎಲ್ಲರ ಗಮನ ಸೆಳೆದರು. ಲಿಂಬೆ ಹಸಿರು ಬಣ್ಣದ ಗೌನ್​ ಜತೆ ತಲೆಗೆ ಬೇಬಿ ಪಿಂಕ್​ ಬಣ್ಣದ ಬ್ಯಾಂಡ್​ ಹಾಗೂ ಅದೇ ಬಣ್ಣದ ಕೊರಳು ಪಟ್ಟಿಯನ್ನೂ ಧರಿಸಿ ಕೆಂಪು ಹಾಸಿನ ಮೇಲೆ ನಡೆಯುತ್ತ ಪೇನ್​ ಆ್ಯಂಡ್​ ಗ್ಲೋರಿ ಸ್ಪ್ಯಾನಿಶ್​ ಡ್ರಾಮಾ ಪ್ರದರ್ಶನಕ್ಕೆ ಕೂಡ ಭೇಟಿ ಕೊಟ್ಟರು. ಕಾನ್ಸ್​ ಚಲನಚಿತ್ರೋತ್ಸವದ ಎರಡನೇ ದಿನದ ತಮ್ಮ ಹಲವು ಫೋಟೋಗಳನ್ನು ದೀಪಿಕಾ ಪಡುಕೋಣೆ ತಮ್ಮ ಇನ್ಸ್ಟಾಗ್ರಾಂನಲ್ಲಿ ಶೇರ್​ ಮಾಡಿದ್ದಾರೆ. ಈ ಎಲ್ಲಾ ಫೋಟೋಗಳಿಗೂ ಪತಿ ರಣವೀರ್​ ಸಿಂಗ್ ವಾವ್ ಎಂದು​ ಮೆಚ್ಚುಗೆ ವ್ಯಕ್ತಪಡಿಸಿದ್ದು, ದೀಪಿಕಾ ಅವರ ವಿಭಿನ್ನ ಉಡುಪು, ಆಕರ್ಷಕ ಸೌಂದರ್ಯಕ್ಕೆ ರಣವೀರ್ ಫುಲ್ ಫಿದಾ ಆಗಿದ್ದಾರೆ.