ಮಲ್ಲಿಕಾರ್ಜುನ ಖರ್ಗೆ, ಧರಂ ಸಿಂಗ್ ಇಬ್ಬರು ಉನ್ನತ ನಾಯಕರು- ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ನುಡಿ… ಬೆಂಗಳೂರು,ಮೇ,17,2019(..): ಮಲ್ಲಿಕಾರ್ಜುನ ಖರ್ಗೆ, ಧರಂ ಸಿಂಗ್ ಇಬ್ಬರು ಉನ್ನತ ನಾಯಕರು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ನುಡಿದರು. ಬೆಂಗಳೂರಿನಲ್ಲಿ ಇಂದು ಮಾತನಾಡಿದ ಹೆಚ್.ವಿಶ್ವನಾಥ್, ಮಲ್ಲಿಕಾರ್ಜುನ ಖರ್ಗೆ ಅವರ ಜತೆ ಯಾರಬ್ಬೈ ಹೋಲಿಕೆ ಮಾಡಬಾರದು. ಖರ್ಗೆ ಅವರದ್ದು ಸಿಎಂ ಸ್ಥಾನಕ್ಕೂ ಮೀರಿದ ವ್ಯಕ್ತಿತ್ವ. ಸಿಎಂ ಸ್ಥಾನ ಏಕೆ ತಪ್ಪಿತು ಎಂದು ಯಾರನ್ನು ಕೇಳಬೇಕು. ಸಿದ್ದರಾಮಯ್ಯ ಅವರನ್ನೇ ಕೇಳಬೇಕು, ಇನ್ನು ಉತ್ತರ ಕರ್ನಾಟಕಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರ ಕೊಡುಗೆ ಅಪಾರವಾದದ್ದು ಎಂದು ಗುಣಗಾನ ಮಾಡಿದರು. ಇತ್ತೀಚೆಗೆ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಮಲ್ಲಿಕಾರ್ಜುನ ಖರ್ಗೆ ಅವಾಗಲೇ ಸಿಎಂ ಆಗಬೇಕಿತ್ತು ಎಂದು ಹೇಳಿಕೆ ನೀಡಿದ್ದರು. ಈ ಕುರಿತು ಭಾರಿ ಚರ್ಚೆಯಾಗಿತ್ತು. : - # # # #