ನಮ್ಮ ಗ್ಯಾರಂಟಿ ಯಾವುದೇ ಅಡೆತಡೆ ಇಲ್ಲದೆ 5 ವರ್ಷ ಮುಂದುವರೆಯುತ್ತೆ- ಸಚಿವ ಎಂ.ಬಿ ಪಾಟೀಲ್. ಬೆಂಗಳೂರು,ಜನವರಿ,31,2024(..):ನಮ್ಮ ಗ್ಯಾರಂಟಿ ಯಾವುದೇ ಅಡೆತಡೆ ಇಲ್ಲದೆ 5 ವರ್ಷ ಮುಂದುವರೆಯುತ್ತದೆ ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ತಿಳಿಸಿದರು. ಲೋಕಸಭೆ ಚುನಾವಣೆಯಲ್ಲಿ ಮತ ಹಾಕದಿದ್ರೆ ಗ್ಯಾರಂಟಿ ರದ್ದು ಎಂಬ ಶಾಸಕ ಹೆಚ್.ಸಿ ಬಾಲಕೃಷ್ಣ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸಚಿವ ಎಂ.ಬಿ ಪಾಟೀಲ್ ಬಾಲಕೃಷ್ಣ ಸುಮ್ಮನೆ ಹೇಳಿರಬೇಕು. ಸೋಲು ಗೆಲುವಿನಿಂದ ಗ್ಯಾರಂಟಿ ನಿರ್ಧಾರ ಆಗಲ್ಲ ನಮ್ಮ ಗ್ಯಾರಂಟಿ 5 ವರ್ಷದ ಮುಂದುವರೆಯುತ್ತದೆ. ಯಾವುದೇ ಅಡೆತಡೆ ಇಲ್ಲದೆ ಗ್ಯಾರಂಟಿ ಮುಂದುವರೆಸುತ್ತೇವೆ ಎಂದು ತಿಳಿಸಿದರು. : - - -5 - - – -