ಸಿಎಂ ಹೆಚ್ಡಿಕೆ ಹೇಳಿಕೆ ಮತ್ತು ಸಂಸದ ನಳೀನ್ ಕುಮಾರ್ ವಿವಾದಾತ್ಮಕ ಟ್ವಿಟ್ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯಿಸಿದ್ದು ಹೀಗೆ… ಕಲ್ಬುರ್ಗಿ,ಮೇ,17,2019(..): ಮಾಜಿ ಪ್ರಧಾನಿ ರಾಜೀವ್ ಗಾಂಧಿ 17 ಸಾವಿರ ಜನರನ್ನ ಕೊಂದಿದ್ದಾರೆ ಎಂದು ವಿವಾದಾತ್ಮಕ ಟ್ವಿಟ್ ಮಾಡಿದ್ದ ಬಿಜೆಪಿ ಸಂಸದ ನಳೀನ್ ಕುಮಾರ್ ಕಟೀಲ್ ವಿರುದ್ದ ಕಿಡಿಕಾರಿರುವ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಇಂತಹ ಮಾತುಗಳಿಂದ ಅವರ ಮನಸ್ಥಿತಿ ತಿಳಿಯುತ್ತದೆ ಎಂದು ವಾಗ್ದಾಳಿ ನಡೆಸಿದರು. ಕಲ್ಬುರ್ಗಿಯಲ್ಲಿ ಇಂದು ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ದೇಶದ ಐಕ್ಯತೆಗಾಗಿ ರಾಜೀವ್ ಗಾಂಧಿ ತಮ್ಮ ಪ್ರಾಣ ಅರ್ಪಿಸಿದ್ದಾರೆ. ಇನ್ಮುಂದೆ ನಾಲಿಗೆ ಬಿಗಿ ಹಿಡಿದು ಮಾತನಾಡಲಿ. ಮಹಾತ್ಮ ಗಾಂಧಿ ಕೊಂದವರನ್ನ ಬಿಜೆಪಿ ದೇವರಂತೆ ಪೂಜಿಸುತ್ತಿದೆ. ಜಾತಿ ಜಾತಿ ನಡುವೆ ಜಗಳ ಹಚ್ಚೋದೆ ಬಿಜೆಪಿಯ ಕೆಲಸ ಎಂದು ಹರಿಹಾಯ್ದರು. ಮಲ್ಲಿಕಾರ್ಜುನ ಖರ್ಗೆ ಅವಾಗಲೇ ಸಿಎಂ ಆಗಬೇಕಿತ್ತು ಎಂದು ಸಿಎಂ ಹೆಚ್.ಡಿ ಕುಮಾರಸ್ವಾಮಿ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಮಲ್ಲಿಕಾರ್ಜುನ ಖರ್ಗೆ, ನಾನು ಅದರ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ. ಆ ಬಗ್ಗೆ ಮಾತನಾಡಲ್ಲ. ಹೈಕಮಾಂಡ್ ನನ್ನನ್ನ ಕರೆದು ಸಿಎಂ ಆಗಿ ಅಂತಾ ಹೇಳಿಲ್ಲ ಎಂದರು. : - - - -