: ಮೈಸೂರಲ್ಲೊಂದು ಅಮಾನವೀಯ ಘಟನೆ : ಎರಡು ಸಾವಿರ ನೋಟಿಗೆ ಚಿಲ್ಲರೆ ಕೇಳಿದ್ದಕ್ಕೆ ಹೀಗಾ ಹೊಡೆಯೋದು…! ಮೈಸೂರು, ಮೇ 17, 2019 : (.. ) ಟೆನ್ಷನ್‌ನಲ್ಲಿರುವ ಸಮಯದಲ್ಲಿ ಬಂದು ೨೦೦೦ರೂ ಗೆ ಚಿಲ್ಲರೆ ಕೇಳಿದ್ದಕ್ಕೆ ಆ ವ್ಯಕ್ತಿಯ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಬಿಳಿಕೆರೆಯಲ್ಲಿ ನಡೆದ ಘಟನೆಯಲ್ಲಿ ಹಲ್ಲೆಗೊಳಗಾಗಿ ಆಸ್ಪತ್ರೆ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಯೇ ಉಮೇಶ್. ಈತ ಚಿಲ್ಲರೆಗಾಗಿ ಅಂಗಡಿಯೊಂದಕ್ಕೆ ಬಂದಿದ್ದ. ಅದಕ್ಕೂ ಮೊದಲು ಬಾರ್ ನಲ್ಲಿ ಚಿಲ್ಲರೆ ಕೇಳಿದ್ದ. ಅಲ್ಲಿ ಚಿಲ್ಲರೆ ಸಿಗದ ಕಾರಣ ಪಕ್ಕದ ಅಂಗಡಿಯಲ್ಲಿ ಕೇಳಿದ್ದ. ಈ ವೇಳೆ ಅಂಗಡಿಯಲ್ಲಿದ್ದ ಸಚ್ವಿನ್ ಹಾಗೂ ಆತನ ಸ್ನೇಹಿತನಿಂದ ಹಲ್ಲೆ. ಘಟನೆಯಿಂದ ಗಂಭೀರವಾಗಿ ಗಾಯಗೊಂಡಿರುವ ಉಮೇಶ್ ಮೈಸೂರಿನ ಆಸ್ಪತ್ರೆಗೆ ದಾಖಲು. ಹಲ್ಲೆಗೊಳಗಾದ ವ್ಯಕ್ತಿ ಹೆಚ್.ಡಿ.ಕೋಟೆ ತಾಲೊಕಿನ ಹಳ್ಳದ‌ಮನುಗನಹಳ್ಳಿ ನಿವಾಸಿ. ಇದೀಗ ಮೈಸೂರಿನ ಜೆ.ಎಸ್.ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು. ಆಸ್ಪತ್ರೆ ಬಿಲ್ ಕಟ್ಟಲಾಗದೆ ಹಲ್ಲೆ‌ಗೊಳಗಾದ ಕುಟುಂಬಸ್ಥರ ಕಣ್ಣೀರು. ಆಸ್ಪತ್ರೆ ಮುಂದೆ ಕಣ್ಣೀರಿಡುತ್ತಿರುವ ಕುಟುಂಬಸ್ಥರು. ಕ್ಷುಲ್ಲಕ ಕಾರಣಕ್ಕೆ ಹಲ್ಲೆ ನಡೆಸಿರುವ ವ್ಯಕ್ತಿಗಳು ಗ್ರಾಮದಲ್ಲಿ ಪ್ರಭಾವಿಗಳಾಗಿದ್ದು ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ. ಈ ನಡುವೆ ಘಟನೆಗೆ ಸಂಬಂಧಿಸಿದಂತೆ ಮೈಸೂರಿನ ಬಿಳಿಕೆರೆ ಠಾಣೆಯಲ್ಲಿ ಪ್ರಕರಣ ದಾಖಲು. ಘಟನೆ ಬಳಿಕ ಆರೋಪಿಗಳಾದ ಸಚ್ಚಿನ್ ಮತ್ತು ಚೇತನ್ ಗೌಡ ನಾಪತ್ತೆಯಾಗಿದ್ದು, ಪೊಲೀಸರು ಪತ್ತೆಗೆ ಮುಂದಾಗಿದ್ದಾರೆ. 2000 . . # # # #