ಬೆಳ್ಳಂಬೆಳಿಗ್ಗೆಯೇ ಗ್ರಾಮಕ್ಕೆ ನುಗ್ಗಿ ದಾಂಧಲೆ ನಡೆಸಿದ ಒಂಟಿ ಸಲಗ: ಬೆಚ್ಚಿಬಿದ್ದ ಗ್ರಾಮಸ್ಥರು… ಮೈಸೂರು,ಮೇ,17,2019(..) ಮೈಸೂರು ಜಿಲ್ಲೆ ಹೆಚ್.ಡಿ ಕೋಟೆ ತಾಲ್ಲೂಕಿನ ಬೀಚನಹಳ್ಳಿ ಗ್ರಾಮಕ್ಕೆ ಬೆಳ್ಳಂಬೆಳಿಗ್ಗೆಯೇ ಕಾಡಾನೆ ನುಗ್ಗಿ ದಾಂಧಲೆ ಮಾಡಿರುವ ಘಟನೆ ನಡೆದಿದೆ. ಬೀಚನಹಳ್ಳಿಯಲ್ಲಿ ಗ್ರಾಮದೊಳಗೆ ಮುಜಾನೆಯೇ ಕಾಡಾನೆ ದಾಳಿ ನಡೆಸಿದ್ದು ಕಾಡಾನೆ ಕಂಡು ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಕಾಡಾನೆ ದಾಳಿಗೆ ಎರಡು ಬೈಕ್, ಒಂದು ಸೈಕಲ್ ಜಖಂ ಆಗಿದ್ದು ಮನೆ ಮುಂಭಾಗ ಕುಳಿತಿದ್ದ ಲಕ್ಷ್ಮಮ್ಮ ಎಂಬ ಮಹಿಳೆ ಮೇಲೂ ಒಂಟಿಸಲಗ ಅಟ್ಯಾಕ್ ಮಾಡಿದೆ. ಇದರಿಂದ ಲಕ್ಷ್ಮಮ್ಮ ತಲೆಗೆ ಗಂಭೀರ ಗಾಯವಾಗಿದ್ದು ಅವರನ್ನ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಒಂಟಿ ಸಲಗ ದಾಳಿ ಕಂಡು ಬೆಚ್ಚಿ ಬಿದ್ದ ಗ್ರಾಮಸ್ಥರು ಮನೆಯಿಂದ ಯಾರು ಹೊರಬಾರದಂತೆ ಕೂಗುತ್ತಿದ್ದರೇ ಇತ್ತ ಆನೆ ನೋಡಲು ಗ್ರಾಮದ ಮಕ್ಕಳು ಮುಗ್ಗಿಬಿದ್ದ ದೃಶ್ಯ ಕಂಡು ಬಂತು. ಬೀಚನಹಳ್ಳಿ- ಸಾಗರೆ ರಸ್ತೆ, ಗ್ರಾಮ, ಕಬಿನಿ ಹಿನ್ನೀರು ಬಳಿ ಆನೆ ಸಂಚರಿಸಿದ್ದು ಮಾಕೋಡ್ಲು, ಸಾಗರೆ ಗ್ರಾಮಗಳಲ್ಲೂ ಒಂಟಿಸಲಗ ಓಡಾಡಿದೆ. ಸದ್ಯ ಸರಗೂರು ಸಮೀಪದ ಜಮೀನಿನಲ್ಲಿ ಆನೆ ಬೀಡುಬಿಟ್ಟಿದ್ದು, ಸ್ಥಳಕ್ಕೆ ಬೀಚನಹಳ್ಳಿ ಪೊಲೀಸರ ಆಗಮಿಸಿದ್ದಾರೆ. ಇನ್ನು ಅರಣ್ಯ ಇಲಾಖೆ ಸಿಬ್ಬಂದಿಗಳಳು ಆನೆ ಹಿಡಿಯಲು ಹರಸಾಹಸಪಡುತ್ತಿದ್ದು, ಕಾಡಾನೆಯನ್ನ ಕಾಡಿಗಟ್ಟುವ ಕಾರ್ಯಾಚರಣೆ ನಡೆಯುತ್ತಿದೆ. ಗೋಪಾಲಸ್ವಾಮಿ, ಕೃಷ್ಣ ಸಾಕಾನೆಗಳ ಮೂಲಕ ಕಾಡಿಗಟ್ಟಲು ಕಾರ್ಯಾಚರಣೆ ನಡೆಸಲಾಗುತ್ತಿದೆ. : - –- - -