ಗಾಳಿ ಸಹಿತ ಗುಡುಗು ಸಿಡಿಲು ಮಳೆ ಆರ್ಭಟಕ್ಕೆ ಹಾರಿ ಹೋದ ಮನೆ ಮೇಲ್ಚಾವಣಿಗಳು: ಬಾಲಕಿ ಮಹಿಳೆಯರಿಬ್ಬರಿಗೆ ಗಾಯ… ಮೈಸೂರು,ಮೇ,17,2019(..): ಮೈಸೂರು ಜಿಲ್ಲೆ ಹೆಚ್.ಡಿ ಕೋಟೆ ತಾಲ್ಲೂಕಿನಲ್ಲಿ ಹಲವೆಡೆ‌ ಗಾಳಿ ಗುಡುಗು‌‌ ಸಿಡಿಲು ಸಹಿತ ಮಳೆಯ‌ ಆರ್ಭಟ ಜೋರಾಗಿ ಜನ ಜೀವನ ಅಸ್ತವ್ಯಸ್ತವಾಗಿತ್ತು. ಎಚ್.ಡಿ.ಕೋಟೆ ತಾಲೂಕಿನ ಹಲವೆಡೆ ವರುಣನ ಅಬ್ಬರ ಹೆಚ್ಚಾಗಿದ್ದು, ಗಾಳಿಯ ರಭಸಕ್ಕೆ ಮನೆಗಳ ಮೇಲ್ಚಾವಣಿಗಳು ಹಾರಿಹೋದ ಘಟನೆ ನಡೆದಿದೆ. ಗಾಳಿ ಮಳೆ ರಭಸಕ್ಕೆ ಸಿಲುಕಿ ಎಚ್.ಡಿ.ಕೋಟೆ ಪಟ್ಟಣದ ಶಿವಾಜಿ ರಸ್ತೆಯಲ್ಲಿ ಮನೆಗಳ ಮೇಲ್ಚಾವಣಿಗಳು ಹಾರಿ ಹೋದವು. ಇನ್ನು ಪ್ರತ್ಯೇಕ ಘಟನೆಗಳಲ್ಲಿ ಮನೆಗಳ ಗೋಡೆ ಕುಸಿತದಿಂದ ಮತ್ತು ಶೀಟ್ ಗಳಿಗೆ‌ ಸಿಲುಕಿ ಮನೆಯಲ್ಲಿದ್ದ ಬಾಲಕಿ ಮತ್ತು ಇಬ್ಬರು ಮಹಿಳೆಯರು ಗಾಯಗೊಂಡಿದ್ದಾರೆ. ಎಚ್.ಡಿ.ಕೋಟೆ ತಾಲೂಕಿನ ಪೆಂಜಳ್ಳಿ ಹಾಡಿಯ ಗೌರಿ (35) ಸುನಿತ (10) ಮತ್ತು ಅವರಗೆರೆ ಗ್ರಾಮದ ದೇವಮ್ಮ(33) ಗಾಯಾಳುಗಳು. ಗಾಯಾಳುಗಳು ಎಚ್.ಡಿ.ಕೋಟೆ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. : - - – –