ಮೈಸೂರಿನಲ್ಲಿ ಪೊಲೀಸರಿಂದ ಶೂಟೌಟ್: ಓರ್ವ ವ್ಯಕ್ತಿ ಸಾವು .. ಮೈಸೂರು,ಮೇ,16,2019(..): ಮೈಸೂರಿನಲ್ಲಿ ಮನಿ ಡಬ್ಲಿಂಗ್ ದಂಧೆಯಲ್ಲಿ ತೊಡಗಿದವರ ಮೇಲೆ ಪೊಲೀಸರು ಶೂಟೌಟ್ ಮಾಡಿದ ಪರಿಣಾಮ ಓರ್ವ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಇಂದು ನಡೆದಿದೆ. ಮೈಸೂರಿನ ಹೆಬ್ಬಾಳ್ ರಿಂಗ್ ರಸ್ತೆ ಬಳಿಯ ಅಪಾರ್ಟ್ ಮೆಂಟ್ ವೊಂದರಲ್ಲಿ ಈ ಘಟನೆ ನಡೆದಿದೆ. ಮೈಸೂರಿನ ವಿಜಯನಗರ ಠಾಣಾ ಪೊಲೀಸರು ಶೂಟೌಟ್ ನಡೆಸಿದ್ದಾರೆ. ಮನಿ ಡಬ್ಲಿಂಗ್ ನಲ್ಲಿ ತೊಡಗಿದ್ದ ಬಾಂಬೆ ಮೂಲದ ವ್ಯಕ್ತಿಗಳ ಮೇಲೆ ಶೂಟೌಟ್ ಆಗಿದೆ. ಪೈರಿಂಗ್ ನಲ್ಲಿ ಓರ್ವ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. : - – - -.