ಡಾ.ಚಿದಾನಂದ್ ನಿಧನಕ್ಕೆ ಕಂಬನಿ ಮಿಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್… ಮೈಸೂರು,ಮೇ,15,2019(..): ಮೈಸೂರು ಸರ್ಕಾರಿ ವೈದ್ಯಕೀಯ ಕಾಲೇಜಿನ ಪೆಥಾಲಜಿ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ.ಎಚ್.ಟಿ. ಚಿದಾನಂದ (71) ಅವರ ನಿಧನಕ್ಕೆ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್,ವಿಶ್ವನಾಥ್ ಕಂಬನಿ ಮಿಡಿದಿದ್ದಾರೆ. ಡಾ.ಚಿದಾನಂದ್ ನನ್ನ ಆಪ್ತ ಸ್ನೇಹಿತ. ವಿದ್ಯಾರ್ಥಿ ದೆಸೆಯಿಂದಲೂ ನನಗೆ ತುಂಬಾ ಒಡನಾಡಿಯಾದವರು ಮಾನವತವಾದಿ ಚಿದಾನಂದ ಅವರನ್ನ ಕಳೆದುಕೊಂಡು ಬಹಳ ನೋವಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ಬೇಸರ ವ್ಯಕ್ತಪಡಿಸಿದರು. ಡಾ.ಚಿದಾನಂದ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಬಳಿಕ ಮಾತನಾಡಿದ ಹೆಚ್. ವಿಶ್ವನಾಥ್, ಡಾ.ಚಿದಾನಂದ್ ಕಷ್ಟದಲ್ಲಿದ್ದವರಿಗೆ ತುಂಬಾ ಚೆನ್ನಾಗಿ ಸ್ಪಂದಿಸುತ್ತಿದ್ದರು. ಆರೋಗ್ಯದ ಬಗ್ಗೆ ತುಂಬಾ ಕಾಳಜಿ ಹೊಂದಿದ್ದ ಚಿದಾನಂದ್ ಸಾಕಷ್ಟು ಆರೋಗ್ಯ ಕಾಳಜಿಯುಳ್ಳ ಪುಸ್ತಕ ಬರೆದಿದ್ರು. ತಾವು ಓದಿ ಪ್ರಾಧ್ಯಾಪಕರಾಗಿದ್ದ ಕಾಲೇಜಿಗೆ ತಮ್ಮ ದೇಹವನ್ನು ದಾನ ಮಾಡಿದ್ದಾರೆ ಎಂದರು. : –.--. ’- .