‘ನಿಫಾ ವೈರಸ್‌’ಗೆ ಚಿತ್ರಕತೆ ರೂಪ: ಜೂನ್’ನಲ್ಲಿ ‘ವೈರಸ್’ ಬಿಡುಗಡೆ ! ಬೆಂಗಳೂರು, ಮೇ 15, 2019 (..): ಕಳೆದ ವರ್ಷದ ಕೇರಳ ಜನರನ್ನು ಕಾಡಿದ್ದ ‘ನಿಫಾ ವೈರಸ್‌’ ಇದೀಗ ಚಿತ್ರಕತೆಯ ರೂಪ ಪಡೆದಿದೆ. ‘ವೈರಸ್’ ಈ ವರ್ಷದ ಬಹುನಿರೀಕ್ಷಿತ ಚಿತ್ರ ಎನಿಸಿಕೊಂಡಿದ್ದು, ಆಶಿಕ್ ಅಬು ಅವರು ಇದರ ಸಾರಥ್ಯ ವಹಿಸಿಕೊಂಡಿದ್ದಾರೆ. ಬಹುತಾರಾಗಣದ ಸಿನಿಮಾ ಇದೇ ಜೂನ್‌ನಲ್ಲಿ ತೆರೆಗೆ ಅಪ್ಪಳಿಸಲು ಸಜ್ಜುಗೊಂಡಿದೆ. ಚಿತ್ರ ತಯಾರಕರು ಇತ್ತೀಚೆಗೆ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ರೇವತಿ ಪಾತ್ರ ಇರುವ ಪೋಸ್ಟರ್ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದೆ. ಕೇರಳದಲ್ಲಿ ವೈರಸ್ ದಾಳಿಯಿಟ್ಟಾಗ ಅದನ್ನು ಸಮರ್ಥವಾಗಿ ಎದುರಿಸಿದ ಹೆಗ್ಗಳಿಗೆ ಕೇರಳದ ಆರೋಗ್ಯ ಸಚಿವೆಕೆ.ಕೆ. ಶೈಲಜಾ ಅವರದ್ದು. ಅವರ ಪಾತ್ರವೇ ಇಲ್ಲಿ ರೇವತಿ ಎಂಬ ಹೆಸರಿನಲ್ಲಿ ಕಾಣಿಸಿಕೊಳ್ಳುತ್ತಿದೆ ಎನ್ನಲಾಗಿದೆ.